ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ (Gichchi Giligili), ಮಜಾ ಭಾರತ ಮೂಲಕ ಎಲ್ಲರಿಗೆ ಚಿರಪರಿಚಿತವಾದ ನಟಿ ಸುಷ್ಮಿತಾ (Sushmita) ಮತ್ತು ಜಗ್ಗಪ್ಪ (Jaggappa) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಇತ್ತು. ಆದರೆ, ಈ ಜೋಡಿ ಅದನ್ನು ಅಲ್ಲಗಳೆಯುತ್ತಲೇ ಬಂದರು.ಆದರೆ, ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರುತ್ತಿದ್ದಾರೆ.
ನಿನ್ನೆ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನಾಳೆ ಮಾಂಗಲ್ಯ ಧಾರಣೆವಿದೆ. ಈ ಜೋಡಿಯ ವಿವಾಹ (marriage) ಮುಹೋತ್ಸವಕ್ಕೆ ಅನೇಕ ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಭಾಗಿಯಾಗಲಿದ್ದಾರೆ.