ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ರೈಲ್ವೆ ನಿಲ್ದಾಣ ಮುಂಭಾಗದ ಆಟೋ ಸ್ಟ್ಯಾಂಡ್ ಬಳಿ ಎರಡು ಅನುಮಾನಾಸ್ಪದವಾಗಿ ಬಾಕ್ಸ್ ಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಅಪರಿಚಿತರು ಎರಡು ಬಾಕ್ಸ್ಗಳು ಬಿಟ್ಟುಹೋಗಿದ್ದು. ಹೀಗಾಗಿ ಅನುಮಾನಗೊಂಡು ಆಟೋ ಚಾಲಕ ಸೈಯದ್ ಕಾಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು, ಬಾಕ್ಸ್ಗಳಲ್ಲಿ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ ಅನುಮಾನ ಸ್ಪದ ಬಾಕ್ಸ್ ಗಳು ಪತ್ತೆಯಾದ ಸ್ಥಳದ ಸುತ್ತಮುತ್ತ ಬಂದೋಬಸ್ತ್ ಮಾಡಿದ ಪೊಲೀಸರು. ಶಿವಮೊಗ್ಗ ಉಪ ವಿಭಾಗ ಎರಡು ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ .