ಪವಿತ್ರ ಹಜ್ ಯಾತ್ರೆಗಾಗಿ ಸುವಿಧಾ ಆ್ಯಪ್: ಕೇಂದ್ರ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೂನ್‌ನಿಂದ ಪವಿತ್ರ ಹಜ್ ಯಾತ್ರೆ ಆರಂಭಗೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಹಜ್ ಯಾತ್ರಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.
ಇದಕ್ಕಾಗಿ ಸುಗಮ ಯಾತ್ರೆಗೆ ಸುವಿಧಾ ಆ್ಯಪ್ ಕೂಡ ಲಾಂಚ್ ಮಾಡಲಾಗಿದೆ. ಮಾರ್ಗಸೂಚಿ ಪ್ರಕಟಿಸಿ, ಆ್ಯಪ್ ಲಾಂಚ್ ಮಾಡಿದ ಅಲ್ಪಸಂಖ್ಯಾತ ಸಚಿವೆ ಸ್ಮೃತಿ ಇರಾನಿ, ಹಜ್ ಯಾತ್ರಿಗಳು ಯಾವುದೇ ಅಡೆ ತಡೆ ಇಲ್ಲದೆ, ಯಾತ್ರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದಿದ್ದಾರೆ.

ಹಜ್ ಮಾರ್ಗಸೂಚಿ 2024 ಹಾಗೂ ಸುವಿಧಾ ಆ್ಯಪ್ ಮೂಲಕ ಹಜ್ ಯಾತ್ರಿಗಳಿಗೆ ಸೇವೆ ಒದಗಿಸುವುದು ಮಾತ್ರ ಅಲ್ಪಸಂಖ್ಯಾತ ಸಚಿವಾಲಯದ ಕಾರ್ಯವಲ್ಲ. ಪ್ರಧಾನಿ ಮೋದಿ ಸಲಹೆಯಂತೆ ಎಲ್ಲಾ ಸಚಿವಾಲಯದ ಸಹಯೋಗದೊಂದಿಗೆ ಹಜ್ ಯಾತ್ರೆಗಳಿಗೆ ಸೇವೆ, ಸುಗಮ ಯಾತ್ರೆ, ಯಾವುದೇ ಸಮಯದಲ್ಲೂ ತುರ್ತು ಸೇವೆ ಅಥವಾ ಇನ್ಯಾವುದೇ ಸಹಾಯಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಕಳೆದ ವರ್ಷ 4,300 ಮಹಿಳೆಯರು ಹಜ್ ಯಾತ್ರೆ ಕೈಗೊಂಡಿದ್ದರು. ಈ ವರ್ಷ ಈ ಸಂಖ್ಯೆ 5,160ಕ್ಕೆ ಏರಿಕೆಯಾಗಿದೆ. ಹಜ್ ಯಾತ್ರಿಗಳಿಗೆ ಎಲ್ಲಾ ರೀತಿಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಸುವಿಧಾ ಆ್ಯಪ್ ಮೂಲಕ ಹಜ್ ಯಾತ್ರಿಗಳು ವಿಮಾನ ಪ್ರಯಾಣದ ಮಾಹಿತಿ, ವಸತಿ ವ್ಯವಸ್ಥೆ, ಆರೋಗ್ಯ ಸೇವೆ, ತುರ್ತು ಸೇವೆ ಸೇರಿದಂತೆ ಹಲವು ಸೇವೆಗಳನ್ನು ನೇರವಾಗಿ ಬಳಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!