ಸುಜುಕಿ ಕಂಪನಿ ಮಾಜಿ ಚೇರ್ಮನ್‌ ಒಸಾಮು ಸುಜುಕಿ ನಿಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಮಾಜಿ ಅಧ್ಯಕ್ಷ ಒಸಾಮು ಸುಜುಕಿ ಅವರು 94 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಡಿಸೆಂಬರ್ 25 ರಂದು ಲಿಂಫೋಮಾದಿಂದ ನಿಧನರಾದರು ಎಂದು ಕಂಪನಿಯು ಘೋಷಣೆ ಮಾಡಿದೆ.

ಕಂಪನಿಯ ನೆಟ್‌ವರ್ಕ್ ಅನ್ನು ವಿಸ್ತರಿಸಲು ಮತ್ತು ಪ್ರಪಂಚದಾದ್ಯಂತ ಸುಜುಕಿ ಕಂಪನಿ ಸಾಗಲು ಒಸಾಮು ಸುಜುಕಿ ಮಾಡಿದ ಕೆಲಸಕ್ಕಾಗಿ ಜನ ನೆನಪಿಸಿಕೊಳ್ಳುತ್ತಾರೆ. ಭಾರತೀಯ ಕಂಪನಿ ಮಾರುತಿಯೊಂದಿಗೆ ಸುಜುಕಿಯ ಪಾಲುದಾರಿಕೆಯೂ ಅವರ ಅಧಿಕಾರಾವಧಿಯಲ್ಲಿಯೇ ನಡೆದಿತ್ತು.

ಒಸಾಮು ಮಟ್ಸುಡಾ ಎಂದು ಹೆಸರು ಹೊಂದಿದ್ದ ಒಸಾಮು ಸುಜುಕಿ 1930ರ ಜನವರಿ 30 ರಂದು ಜಪಾನಿನ ಗೆರೋದಲ್ಲಿ ಜನಿಸಿದರು. 1958ರಲ್ಲಿ ಸುಜುಕಿ ಕುಟುಂಬದ ಹುಡುಗಿಯನ್ನು ಮದುವೆಯಾದ ಬಳಿಕ ತಮ್ಮ ಸರ್‌ನೇಮ್‌ನಲ್ಲಿ ಹೆಂಡತಿಯ ಕುಟುಂಬದ ಹೆಸರನ್ನು ಸೇರಿಸಿದರು. ಇಲ್ಲಿನಿಂದಲೇ ಸುಜುಕಿ ಮೋಟಾರ್‌ ಕಾರ್ಪೋರೇಷನ್‌ನ ಪರಿವರ್ತನಾ ಪ್ರಯಾಣ ಆರಂಭವಾಗಿತ್ತು.1958ರಲ್ಲಿ ಶೋಕೋ ಸುಜುಕಿಯನ್ನು ವಿವಾಹವಾಗಿದ್ದರು. ಶೋಕೋ 1909ರಲ್ಲಿ ಸ್ಥಾಪನೆ ಮಾಡಲಾದ ಸುಜುಕಿ ಮೋಟಾರ್‌ ಎನ್ನುವ ಹೆಸರಿನ ಮಗ್ಗ ತಯಾರಿಕಾ ಕಂಪನಿಯ ಸಂಸ್ಥಾಪಕ ಮಿಚಿಯೋ ಸುಜುಕಿಯ ಮೊಮ್ಮಗಳಾಗಿದ್ದರು.

ಒಸಾಮು ಸುಮಾರು 40 ವರ್ಷಗಳ ಕಾಲ ಕಂಪನಿಯನ್ನು ಮುನ್ನಡೆಸಿದರು. ಈ ಸಮಯದಲ್ಲಿ, ಅವರು ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರ ಮಾರ್ಗದರ್ಶನದಲ್ಲಿ, ಉತ್ತರ ಅಮೇರಿಕಾ ಮತ್ತು ಯುರೋಪ್‌ನಲ್ಲಿ ತನ್ನ ಜಾಲವನ್ನು ವಿಸ್ತರಿಸಲು ಜನರಲ್ ಮೋಟಾರ್ಸ್ ಮತ್ತು ಫೋಕ್ಸ್‌ವ್ಯಾಗನ್‌ನೊಂದಿಗೆ ಸುಜುಕಿ ಮೋಟಾರ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರವೇಶಿಸಿತು. ಇಂದು, ಸುಜುಕಿ ಆಟೋಮೊಬೈಲ್ ಜಗತ್ತಿನಲ್ಲಿ ದೊಡ್ಡ ಹೆಸರಾಗಿದೆ. ಕಂಪನಿಯು ಸಣ್ಣ ಕಾರುಗಳಿಂದ SUV ಗಳಲ್ಲಿ ಮತ್ತು ದ್ವಿಚಕ್ರ ವಾಹನ ಉದ್ಯಮದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ.

ಭಾರತಕ್ಕೆ ಪ್ರವೇಶಿಸಿದ್ದು ದೊಡ್ಡ ನಿರ್ಧಾರ
ಒಸಾಮು ಸುಜುಕಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಕಂಪನಿಯ ಹಿತಾಸಕ್ತಿಗಾಗಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡರು. ಆದರೆ ಅತ್ಯಂತ ಮಹತ್ವದ ನಿರ್ಧಾರವೆಂದರೆ ಎಂಬತ್ತರ ದಶಕದಲ್ಲಿ ಸುಜುಕಿ ಭಾರತೀಯ ಮಾರುಕಟ್ಟೆಗೆ ಪ್ರವೇಶ ಮಾಡಿದ್ದು. ಸುಜುಕಿ ಮೋಟಾರ್ ಕಾರ್ಪೊರೇಷನ್ 1982 ರಲ್ಲಿ ಮಾರುತಿ ಉದ್ಯೋಗ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಿತು ಮತ್ತು ಭಾರತದ ಅತ್ಯಂತ ಜನಪ್ರಿಯ ಕಾರು ಮಾರುತಿ 800 ಅನ್ನು ಪರಿಚಯಿಸಿತು. ಈ ಕಾರನ್ನು 1983 ರಲ್ಲಿ ಬಿಡುಗಡೆ ಮಾಡಲಾಯಿತು. ಹಲವು ದಶಕಗಳ ಕಾಲ ಇದು ದೇಶದಲ್ಲಿ ಅತಿಹೆಚ್ಚು ಮಾರಾಟವಾದ ಕಾರು ಎನ್ನುವ ಖ್ಯಾತಿ ಗಳಿಸಿತ್ತು. ಇಂದು ಮಾರುತಿ ಸುಜುಕಿ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!