ಹೊಸದಿಗಂತ ಡಿಜಿಟಲ್ ಡೆಸ್ಕ್:
RBI ನ ಡೆಪ್ಯೂಟಿ ಗವರ್ನರ್ ಆಗಿ SBI MD ಸ್ವಾಮಿನಾಥನ್ ಜಾನಕಿರಾಮನ್ ರನ್ನು ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಾನಕಿರಾಮನ್ ಅವರ ಅಧಿಕಾರಾವಧಿ ಜೂನ್ 22 ರಂದು ಕೊನೆಗೊಳ್ಳಲಿದ್ದು, ಮಹೇಶ್ ಕುಮಾರ್ ಜೈನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಇದೀಗ ಸ್ವಾಮಿನಾಥನ್ ಜಾನಕಿರಾಮನ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಮಂಗಳವಾರ ನೇಮಿಸಿದೆ.