ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಚುನಾವಣೆಗೆ ಕೆಲದಿನಗಳಿರುವಾಗ ಬಿಜೆಪಿ ಪಾಳೆಯ ತೊರೆದು ಎದುರಾಳಿ ಸಮಾಜವಾದಿ ಪಕ್ಷಕ್ಕೆ ಜಿಗಿದಿದ್ದ ಸ್ವಾಮಿ ಪ್ರಸಾದ್ ಮೌರ್ಯಗೆ ಭಾರೀ ಮುಖಭಂಗ ಎದುರಾಗಿದೆ.
ಫಾಜಿಲ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮೌರ್ಯ, ಬಿಜೆಪಿ ಅಭ್ಯರ್ಥಿ ಸುರೇಂದ್ರ ಕುಶ್ವಾಹ ಎದುರು 21,000 ಮತಗಳ ಅಂತರದಿಂದ ಭಾರೀ ಅಂತರದಿಂದ ಹಿನ್ನಡೆ ಕಂಡಿದ್ದಾರೆ.
ಕಳೆದ ವಿಧಾನಭಾ ಕ್ಷೇತ್ರದಲ್ಲಿ ಪದ್ರೌನಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮೌರ್ಯ ಬಳಿಕ ಬಿಜೆಪಿಯ ಯೋಗಿ ಸರ್ಕಾರದಲ್ಲಿ ಸಚಿವ ಹುದ್ದೆ ನಿರ್ವಹಿಸಿದ್ದರು. ಆದರೆ ಚುನಾವಣೆಗೆ ಹೊಸ್ತಿಲಲ್ಲೇ ಅಖಿಲೇಶ್ ಯಾದವ್ ರ ಸಮಾಜವಾದಿ ಪಕ್ಷಕ್ಕೆ ಜಿಗಿದು ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ