ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಗೆಷ್ಟೇ ವೈವಾಹಿಕ ಜೀವನ ಆರಂಭಿಸಿದ್ದ ನಟಿ ಸ್ವರಾ ಭಾಸ್ಕರ್ ಇದೀಗ ತಾಯಿಯಾಗುತ್ತಿದ್ದಾರೆ. ಬೇಬಿ ಬಂಪ್ ಕಾಣುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಪತಿ ಫಹಾದ್ ಜೊತೆ ಕುಳಿತ ಫೋಟೊವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಬೇಬಿ ಬಂಪ್ ಕಾಣಿಸುತ್ತಿದೆ.
ಮೂರು ತಿಂಗಳ ಹಿಂದಷ್ಟೇ ಮದುವೆ ಫೋಟೊಸ್‌ಗಳನ್ನು ಶೇರ್ ಮಾಡಿ ಸದ್ದು ಮಾಡಿದ್ದ ಸ್ವರಾ ಕೆಲವೊಮ್ಮೆ ಎಲ್ಲಾ ಪ್ರಾರ್ಥನೆಗಳೂ ಒಟ್ಟಿಗೇ ನೆರವೇರುತ್ತವೆ. ಹೊಸ ಜಗತ್ತಿಗೆ ಕಾಲಿಡುತ್ತಿದ್ದೇವೆ ಎನ್ನುವ ಕ್ಯಾಪ್ಷನ್ ಹಾಕಿದ್ದಾರೆ.
ಕೆಲವರು ಈ ಪೋಸ್ಟ್‌ಗೆ ಕಂಗ್ರಾಟ್ಸ್ ಎಂದರೆ ಹಲವರು ನೆಗೆಟಿವ್ ಕಮೆಂಟ್ಸ್ ಮಾಡಿದ್ದಾರೆ. ಈಗೆಲ್ಲಾ ಮೊದಲು ಮಗು ನಂತರ ಮದುವೆ ಬಾಲಿವುಡ್‌ನ ಹೊಸ ಟ್ರೆಂಡ್ ಎಂದಿದ್ದಾರೆ. ಇನ್ನು ಸದ್ದಿಲ್ಲದೇ ಮದುವೆಯಾಗಿದ್ದಕ್ಕೇ ಇದೇ ಕಾರಣ ಎಂದೆಲ್ಲಾ ಹೇಳಿದ್ದಾರೆ.