ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ಥಾನಕ್ಕೆ ಸ್ವಾತಿ ಮಲಿವಾಲ್ ರಾಜೀನಾಮೆ ನೀಡಿದ್ದಾರೆ.ಅವರು ತಮ್ಮ ರಾಜೀನಾಮೆಯನ್ನು ದೆಹಲಿ ಸರ್ಕಾರಕ್ಕೆ ಕಳುಹಿಸಿದ್ದಾರೆ.
ಆಮ್ ಆದ್ಮಿ ಪಕ್ಷ (AAP) ಸ್ವಾತಿ ಮಲಿವಾಲ್ ಅವರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಿಸಿದ್ದು, ಈ ಹಿನ್ನೆಲೆ ಡಿಸಿಡಬ್ಲ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಿಳಾ ಹಕ್ಕುಗಳಿಗಾಗಿ ವಾದಿಸುವ ಮೂಲಕ ಹೆಸರುವಾಸಿಯಾದ ಸ್ವಾತಿ ಮಲಿವಾಲ್ ಅವರು ಸಂಸತ್ತಿಗೆ ಪಾದಾರ್ಪಣೆ ಮಾಡಲಿದ್ದಾರೆ.
ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (PAC) ಸಂಜಯ್ ಸಿಂಗ್ ಮತ್ತು ಎನ್ಡಿ ಗುಪ್ತಾ ಅವರನ್ನ ಎರಡನೇ ಅವಧಿಗೆ ಮೇಲ್ಮನೆ ಸದಸ್ಯರಾಗಿ ನಡೆಸಲು ನಿರ್ಧರಿಸಿದೆ.