ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ನಿರ್ಮಾಣ ಸಂಸ್ಥೇ ಆಪಲ್ ಬಾಕ್ಸ್ ಮೂಲಕ ಬರುತ್ತಿರುವ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಶೀರ್ಷಿಕೆಯನ್ನು ಬಳಸಬಾರದು ಎಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಆಕ್ಷೇಪ ಎತ್ತಿದ್ದಾರೆ.
ಈಗಾಗಲೇ ಈ ಶೀರ್ಷಿಕೆಯನ್ನು ನೋಂದಾಯಿಸಿದ್ದು, ಬೇರೆ ಯಾರೂ ಈ ಹೆಸರನ್ನು ಬಳಸಲು ಅವಕಾಶ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೂಟಿಂಗ್ ಹೆಚ್ಚುಕಮ್ಮಿ ಮುಗಿದಿತ್ತು.
ಚಿತ್ರಕ್ಕೆ ಅಂಬರೀಷ್ ನಾಯಕರಾಗಿದ್ದರು ಹಾಗೂ ಸುಹಾಸಿನಿ ನಾಯಕಿಯಾಗಿದ್ದರು. ಅಂಬರೀಷ್ ಅವರ ನಿಧನದ ನಂತರ ಸಿನಿಮಾ ಹಾಗೇ ನಿಂತಿದೆ. ಕೆಲವು ದೃಶ್ಯಗಳ ಚಿತ್ರೀಕರಣ ಇನ್ನು ಬಾಕಿ ಇತ್ತು ಎಂದು ಪತ್ರದಲ್ಲಿ ತಿಳಿಸಲಾಗಿದೆ.