ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ದೇಶದ ಪ್ರಮುಖ ನಗರಗಳಲ್ಲಿ ಟೊಮೇಟೊ ಬೆಲೆ 100 ರೂಪಾಯಿಗೂ ಹೆಚ್ಚಾಗಿದ್ದು, ಈ ಕುರಿತು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದು, ಟೊಮೆಟೊ ಬೆಲೆ ಏರಿಕೆಯು ತಾತ್ಕಾಲಿಕ ವಿದ್ಯಮಾನ.ಶೀಘ್ರದಲ್ಲೇ ದರ ಇಳಿಕೆಯಾಗಲಿದೆ ಎಂದು ಮಂಗಳವಾರ ತಿಳಿಸಿದ್ದಾರೆ.
ಟೊಮೇಟೊ ಹೆಚ್ಚು ಹಾಳಾಗುವ ವಸ್ತುವಾಗಿದೆ. ಹಠಾತ್ ಮಳೆ ಬೀಳುವ ಪ್ರದೇಶಗಳಲ್ಲಿ ಟೊಮೇಟೊ ಸಾಗಾಟದ ಮೇಲೆ ಪರಿಣಾಮ ಬೀರುತ್ತದೆ. ಇದು ತಾತ್ಕಾಲಿಕ ಸಮಸ್ಯೆ.
ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆಯಾಗಲಿದೆ. ಈ ಸಮಯದಲ್ಲಿ ಪ್ರತಿ ವರ್ಷ ಟೊಮೆಟೊ ಬೆಲೆ ಏರಿಕೆಯಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಸದ್ಯ ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟೊಮ್ಯಾಟೋ ಬೆಲೆ ನೂರು ರೂಪಾಯಿ ಮುಟ್ಟಿದೆ.