ಟಿ20 ರ‍್ಯಾಂಕಿಂಗ್: ಸೂರ್ಯ ಕುಮಾರ್​ ಯಾದವ್​ ಗೆ ಎರಡನೇ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ಸೂರ್ಯ ಕುಮಾರ್​ ಯಾದವ್​ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ರಿಜ್ವಾನ್​ ಇದ್ದಾರೆ. ಇಬ್ಬರ ನಡುವೆ 16 ಅಂಕಗಳ ಅಂತರ ಇದೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 6 ಪಂದ್ಯಗಳನ್ನು ಆಡಿರುವ ಸೂರ್ಯ 838 ಅಂಕಗಳಿಂದ ಎರಡನೇ ಸ್ಥಾನ ಅಂಕರಿಸಿದ್ದಾರೆ. ರಿಜ್ವಾನ್​ 854 ರೇಟಿಂಗ್​ನಿಂದ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಕೆ ಎಲ್​ ರಾಹುಲ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಕ್ರಮವಾಗಿ 14, 15, 16 ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್​ನಲ್ಲಿ ಟಾಪ್​ ಟೆನ್​ ಸ್ಥಾನದಲ್ಲಿ ಯಾರು ಇಲ್ಲ. 12ನೇ ಸ್ಥಾನದಲ್ಲಿ ಭುವನೇಶ್ವರ್​ ಕುಮಾರ್​ ಇದ್ದಾರೆ. ಆಲ್​ರೌಂಡರ್​ ವಿಭಾಗದಲ್ಲಿ ಹಾರ್ದಿಕ್​ ಪಾಂಡ್ಯ ಐದನೇ ಸ್ಥಾನದಲ್ಲಿದ್ದಾರೆ. ತಂಡಗಳ ರ‍್ಯಾಂಕಿಂಗ್​ನಲ್ಲಿ ಭಾರತ 268 ಅಂಕಗಳೊಂದಿಗೆ ಮೊದಲ ಹಾಗೂ ನಂತರದಲ್ಲಿ ಇಂಗ್ಲೆಂಡ್ ​262 ಎರಡನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here