March 22, 2026
Sunday, March 22, 2026
spot_img

ಟಿ20 ವಿಶ್ವಕಪ್ | ಅಫ್ಘಾನಿಸ್ತಾಕ್ಕೆ ಮೊದಲ ಸೋಲಿನ ಕಹಿ, ಮ್ಯಾಚ್ ಗೆದ್ದು ನ್ಯೂಜಿಲ್ಯಾಂಡ್‌ ಶುಭಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್‌ ತಂಡ ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ, ಗುಲ್ಬದಿನ್ ನೈಬ್(63) ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ 17.5 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ನಷ್ಟಕ್ಕೆ 183 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ನ್ಯೂಜಿಲ್ಯಾಂಡ್‌ ಫಿನ್‌ ಅಲೆನ್‌(1) ಮತ್ತು ರಚಿನ್‌ ರವೀಂದ್ರ(0) ವಿಕೆಟ್‌ ಕಳೆದುಕೊಂಡು ಆರಂಭದಲ್ಲೇ ಆಘಾತ ಎದುರಿಸಿದರೂ, ಟಿಮ್‌ ಸಿಫರ್ಟ್‌ ಮತ್ತು ಗ್ಲೆನ್‌ ಫಿಲಿಪ್ಸ್‌ ಆಕ್ರಮಣಕಾರಿ ಬ್ಯಾಟಿಂಗ್‌ ನೆರವಿನಿಂದ ಚೇತರಿಕೆ ಕಂಡಿತು. ಟಿಮ್‌ ಸಿಫರ್ಟ್‌ 65 ರನ್‌ ಬಾರಿಸಿ ಅರ್ಧಶತಕ ಪೂರೈಸಿದರು. ಆದರೆ ಫಿಲಿಪ್ಸ್‌ 8 ರನ್‌ ಅಂತರದಿಂದ ಅರ್ಧಶತಕ ವಂಚಿತರಾದರು. ಅವರು 25 ಎಸೆತಗಳಿಂದ 42 ರನ್‌ ಗಳಿಸಿದರು. ಅಂತಿಮವಾಗಿ ಡೇರಿಯಲ್‌ ಮಿಚೆಲ್‌(25) ಮತ್ತು ಮಿಚೆಲ್‌ ಸ್ಯಾಂಟ್ನರ್‌ 17 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !