February 16, 2026
Monday, February 16, 2026
spot_img

T20 ವಿಶ್ವಕಪ್‌ | ಸ್ಪಿನ್ನರ್‌ಗಳ ಮೇಲೆ ಇಟ್ಟ ನಂಬಿಕೆ ಸುಳ್ಳಾಯಿತು: ಸಲ್ಮಾನ್ ಅಲಿ ಅಘಾ ಬೇಸರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬೊದಲ್ಲಿ ನಡೆದ T20 ವಿಶ್ವಕಪ್ ಪಂದ್ಯವು ಭಾರತ–ಪಾಕಿಸ್ತಾನ ಪೈಪೋಟಿಯ ಮತ್ತೊಂದು ಅಧ್ಯಾಯಕ್ಕೆ ಸಾಕ್ಷಿಯಾಯಿತು. ಆದರೆ ನಿರೀಕ್ಷೆ ಮೂಡಿಸಿದ್ದ ಪಾಕ್ ತಂಡ ಮತ್ತೊಮ್ಮೆ ಭಾರತ ಎದುರು ಮುಗ್ಗರಿಸಿ, ಸೋಲಿನ ಸಂಖ್ಯೆಯನ್ನು 8ಕ್ಕೆ ಹೆಚ್ಚಿಸಿಕೊಂಡಿತು. ಆರ್ ಪ್ರೇಮದಾಸ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ದುಕೊಂಡರೂ, ಭಾರತವನ್ನು ತಡೆಯಲು ಸಾಧ್ಯವಾಗಲಿಲ್ಲ.

ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ ತಂಡ 18 ಓವರ್‌ಗಳಲ್ಲಿ 114 ರನ್‌ಗೆ ಆಲೌಟ್ ಆಗಿ 61 ರನ್ ಅಂತರದ ಸೋಲು ಅನುಭವಿಸಿತು.

ಇದನ್ನೂ ಓದಿ:

ಪಂದ್ಯದ ಬಳಿಕ ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಮಾತನಾಡಿ, ಸ್ಪಿನ್ನರ್‌ಗಳ ಮೇಲೆ ನಂಬಿಕೆ ಇಟ್ಟಿದ್ದೆವು. ಕಳೆದ 6 ತಿಂಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಬಾರಿ ನಿರೀಕ್ಷೆ ಈಡೇರಲಿಲ್ಲ ಎಂದರು. ಪವರ್ ಪ್ಲೇನಲ್ಲಿ 3 ಅಥವಾ 4 ವಿಕೆಟ್ ಕಳೆದುಕೊಂಡರೆ ಚೇಸಿಂಗ್ ಕಷ್ಟವಾಗುತ್ತದೆ ಎಂದು ಒಪ್ಪಿಕೊಂಡರು.

ಪಿಚ್ ಆರಂಭದಲ್ಲಿ ಬೌಲಿಂಗ್‌ಗೆ ಅನುಕೂಲಕರವಾಗಿದ್ದರೂ, ಪರಿಸ್ಥಿತಿಗೆ ತಕ್ಕ ಬದಲಾವಣೆ ಮಾಡಲಿಲ್ಲ. 2 ದಿನಗಳಲ್ಲಿ ಇನ್ನೊಂದು ಪಂದ್ಯವಿದ್ದು, ಅದನ್ನು ಗೆದ್ದು ಸೂಪರ್ 8 ಪ್ರವೇಶಿಸುವುದೇ ಈಗ ತಂಡದ ಗುರಿ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !