September 27, 2026
Sunday, September 27, 2026
spot_img

ಟಿ20 ವಿಶ್ವಕಪ್ | ಒಮಾನ್‌ ವಿರುದ್ಧ ಜಿಂಬಾಬ್ವೆಗೆ ಎಂಟು ವಿಕೆಟ್‌ಗಳ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ತಂಡ ಒಮಾನ್ ವಿರುದ್ಧ ಗೆಲುವು ದಾಖಲಿಸಿದೆ.

ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಒಮಾನ್ ತಂಡ ಕೇವಲ 103 ರನ್‌ಗಳಿಗೆ ಸೀಮಿತವಾಯಿತು. ಇದಕ್ಕೆ ಪ್ರತಿಯಾಗಿ, ಜಿಂಬಾಬ್ವೆ 14ನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗುರಿಯನ್ನು ತಲುಪಿತು.

ಒಮಾನ್ ಬ್ಯಾಟ್ಸ್‌ಮನ್‌ಗಳು ಎದುರಾಳಿ ವೇಗಿಗಳನ್ನು ನಿಭಾಯಿಸುವಲ್ಲಿ ವಿಫಲರಾದರು. ಒಂದು ಹಂತದಲ್ಲಿ ಒಮನ್ 27/5 ಕ್ಕೆ ಸಂಕಷ್ಟದಲ್ಲಿತ್ತು. ಈ ನಡುವೆ ಆಡಿದ ಬ್ಯಾಟರ್‌ಗಳು ಯಾರು ಕೂಡ ಒಂದಂಕಿ ರನ್‌ ದಾಟುವಲ್ಲಿ ವಿಫಲರಾದರು.

ಜಿಂಬಾಬ್ವೆ ಪರ ಬ್ಯಾಟಿಂಗ್‌ನಲ್ಲಿ ಬ್ರಿಯಾನ್ ಬೆನೆಟ್ 48 ರನ್ ಗಳಿಸಿ ಅಜೇಯರಾಗಿ ಉಳಿದರು. ಬ್ರೆಂಡನ್ ಟೇಲರ್ 31, ತದಿವನಾಶೆ ಮರುಮಾನಿ 21 ರನ್‌ ಗಳಿಸುವ ಮೂಲಕ ಜಿಂಬಾಬ್ವೆಗೆ ಗೆಲುವಿನ ಕಾಣಿಕೆ ನೀಡಿದರು.

Must Read