ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ‘ಟಗರು ಪುಟ್ಟಿ’ ಎಂದೇ ಜನಪ್ರಿಯರಾಗಿರುವ ನಟಿ ಮಾನ್ವಿತಾ ಈಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದುವೇ ‘BAD’. ಕನ್ನಡದ ನಿರ್ದೇಶಕ ಪಿ.ಸಿ. ಶೇಖರ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
‘BAD’ ಸಿನಿಮಾದಲ್ಲಿ ನಟಿ ಮಾನ್ವಿತಾ ಲುಕ್ ರಿವೀಲ್ ಆಗಿದೆ. ಚಾಟರಿ ಬಿಲ್ಲು ಹಿಡಿದು ಬಂದ ಮಾನ್ವಿತಾ ಲುಕ್ ಸಿನಿಪ್ರಿಯರಿಗೆ ಮೆಚ್ಚುಗೆ ಆಗಿದೆ. ಮತ್ತೆ ಕಮ್‌ಬ್ಯಾಕ್ ಮಾಡಿರೋ ಮಾನ್ವಿತಾ ಫಸ್ಟ್ ಲುಕ್‌ನಿಂದಲೇ ಗೆದ್ದು ಬೀಗಿದ್ದಾರೆ.
‘BAD’ ಸಿನಿಮಾದ ಮಾನ್ವಿತಾ ಲುಕ್ ರಿವೀಲ್ ಆಗಿದೆ. ಲಂಗ ಧಾವಣಿ ಗೆಟಪ್‌ನಲ್ಲಿ, ಕೈಯಲ್ಲಿ ಚಾಟರಿ ಬಿಲ್ಲು ಹಿಡಿದು ಕೊಟ್ಟಿರೋ ಲುಕ್ ಸಿನಿಮಾ ಪ್ರೇಮಿಗಳಿಗಂತೂ ಹಿಡಿಸಿದೆ. ಫೋಟೊಗಳನ್ನು ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಮಾನ್ವಿತಾಗೂ ಈ ಲುಕ್ ಕಿಕ್ ಕೊಟ್ಟಿದೆ. ಪಾತ್ರದ ಬಗ್ಗೆ ಖುಷಿಯಾಗಿದ್ದು, ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
‘ಪ್ರೀತಿಯ ರಾಯಬಾರಿ’ ಸಿನಿಮಾದ ನಕುಲ್ ಗೌಡ ‘BAD’ ಸಿನಿಮಾದ ಹೀರೊ. ಯುವ ನಟಿಗೆ ಮಾನ್ವಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್, ಕಾಮಿಡಿ, ಸಸ್ಪೆನ್ಸ್ ಹೀಗೆ ವಿಭಿನ್ನ ಜಾನರ್‌ಗಳಿಗೆ ಕೈ ಹಾಕುವ ನಿರ್ದೇಶಕ ಪಿ ಸಿ ಶೇಖರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಪಾತ್ರದ ಫಸ್ಟ್ ಲುಕ್ ನೋಡಿ ಮಾನ್ವಿತಾ ದಿಲ್ ಖುಷ್ ಆಗಿದ್ದಾರೆ.
ಬೋಲ್ಡ್ ಹುಡುಗಿಯ ಪಾತ್ರ ನನ್ನದು
“ನನಗೆ ‘BAD’ ಸಿನಿಮಾದ ಪಾತ್ರ ತುಂಬಾನೇ ಇಷ್ಟವಾಯಿತು. ಈ ಸಿನಿಮಾದಲ್ಲಿ ನನ್ನ ಹೆಸರು ಪವಿತ್ರ. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರ ನನ್ನದು. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಪಿ.ಸಿ.ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ನಟಿ ಮಾನ್ವಿತಾ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.