ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳು ಅಸ್ವಸ್ಥಳಾಗಿದ್ದಾಳೆ…ಆಕೆಯನ್ನು ಚೆನ್ನಾಗಿ ನೋಡಿಕೊ…ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಮೃತ ಪಟ್ಟ ಪೈಲಟ್ ಅನಿಲ್ ಸಿಂಗ್ (57), ಅಪಘಾತಕ್ಕೂ ಮುನ್ನ ತನ್ನ ಪತ್ನಿ ಬಳಿ ಮುದ್ದಿನ ಮಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದ್ದರೆಂಬ ಮನಕಲಕುವ ವಿಚಾರ ಈಗ ಬಹಿರಂಗವಾಗಿದೆ.
ಮುಂಬೈನ ಅಂಧೇರಿ ನಿವಾಸಿಯಾಗಿರುವ ಪೈಲಟ್ ಸಿಂಗ್, ಕರ್ತವ್ಯಕ್ಕೆ ತೆರಳುವ ಮುನ್ನ ಪತ್ನಿಗೆ ದೂರವಾಣಿ ಕರೆ ಮಾಡಿ ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ರಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಇದೇ ಅವರು ಪತ್ನಿಯೊಂದಿಗೆ ಮಾತನಾಡಿರುವ ಕೊನೆಯ ಮಾತಾಗಿತ್ತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ದುರಂತದ ಬಗ್ಗೆ ತಿಳಿದ ಬಳಿಕ ಪತಿಯ ಅಂತ್ಯಕ್ರಿಯೆ ನೆರವೇರಿಸಲು ಪೈಲಟ್ ಸಿಂಗ್ ಅವರ ಪತ್ನಿ ಪುತ್ರಿಯೊಂದಿಗೆ ಹೊಸದಿಲ್ಲಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪತಿಯ ಸಾವಿನ ದುಃಖ ಜೀವನವಿಡೀ ಇರುತ್ತದೆ. ಆದರೆ, ಹೆಲಿಕಾಪ್ಟರ್ ಅವಘಡಕ್ಕಾಗಿ ತಾನು ಯಾರನ್ನೂ ದೂಷಿಸುವುದಿಲ್ಲ. ಇದು ಹವಮಾನ ವೈಪರೀತ್ಯದಿಂದಾಗಿ ಸಂಭವಿಸಿದ ಅಪಘಾತವಾಗಿದೆ . ಎಂದು ಆನಂದಿತಾ ತಿಳಿಸಿದ್ದಾರೆ.