ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿಗರಿಗೆ ಕಬೋರ್ಡ್ನಲ್ಲಿ ಎತ್ತಿಟ್ಟಿದ್ದ ಸ್ವೆಟರ್,ಟೋಪಿಗಳನ್ನು ಬಳಸೋ ಸಮಯ ಬಂದೇ ಬಿಟ್ಟಿದೆ.
ಹೌದು, ತಮಿಳುನಾಡು, ಕೇರಳ ಮೇಲ್ಮೈ ಸುಳಿಗಾಳಿಯ ಎಫೆಕ್ಟ್ನಿಂದಾಗಿ ಬೆಂಗಳೂರು ಇನ್ನೂ ಎರಡು ದಿನ ಚಳಿಯ ವಾತಾವರಣದಿಂದ ಕೂಡಿರಲಿದೆ.
ಭಾನುವಾರದಿಂದಲೂ ಬೆಂಗಳೂರಿಗೆ ಸೂರ್ಯನ ದರ್ಶನ ಆಗಿಲ್ಲ, ಇನ್ನೂ ಎರಡು ದಿನ ಇದೇ ವಾತಾವರಣ ಮುಂದುವರಿಯಲಿದೆ.
ತಮಿಳುನಾಡು, ಕೇರಳ ಸಮುದ್ರ ಭಾಗದಲ್ಲಿನ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ಬೆಂಗಳೂರು ತಂಪಾಗಿದೆ.