ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಿ, ಆಪರೇಷನ್ ಸಿಂದೂರ್ ಮುಂದುವರಿಸಿ: ಕೇಂದ್ರಕ್ಕೆ ಓವೈಸಿ ಒತ್ತಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂದೂರ್’ ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ AIMIM ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.

ಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಮೋದಿ ಸರ್ಕಾರದ ಭದ್ರತಾ ವೈಫಲ್ಯದ ಜೀವಂತ ಉದಾಹರಣೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘಟನೆಗೆ ಜವಾಬ್ದಾರಿ ಹೊತ್ತಿದ್ದಾರೆ ಎಂದು ಉಲ್ಲೇಖಿಸಿ, ‘ಮೂರು ತಿಂಗಳ ನಂತರ ಜವಾಬ್ದಾರಿ ವಹಿಸಿಕೊಂಡರೆ, ಸಿನ್ಹಾ ರಾಜೀನಾಮೆ ನೀಡಬೇಕು’ ಎಂದು ಓವೈಸಿ ಆಗ್ರಹಿಸಿದರು.

ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಿಒಕೆ ಮತ್ತು ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಲಾಗಿದೆ. ಈ ಕಾರ್ಯಾಚರಣೆಯನ್ನು ಮುಂದುವರಿಸಿ, ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಶಿಕ್ಷಿಸಬೇಕೆಂದು ಓವೈಸಿ ಮನವಿ ಮಾಡಿದರು. ಈ ವೇಳೆ ಪಹಲ್ಗಾಮ್‌ಗೆ ಸೇಡು ತೀರಿಸಿಕೊಳ್ಳಲೇಬೇಕು ಎಂದು ಒತ್ತಾಯಿಸಿದರು.

ಚೀನಾ ಬಾಂಗ್ಲಾದೇಶದಲ್ಲಿ ಪ್ರಭಾವ ಹೆಚ್ಚಿಸುತ್ತಿದೆ, ಆದರೆ ಇಲ್ಲಿ ಮನೆಗಳನ್ನು ಕೆಡವುವ ಮತ್ತು ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಚರ್ಚೆ ನಡೆಯುತ್ತಿದೆ ಅದರ ಬದಲು ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗುವ ಬೆದರಿಕೆಗಳ ಮೇಲೆ ಗಮನಹರಿಸಿ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!