ಶಿರೂರು ಶೋಧ ಕಾರ್ಯಾಚರಣೆಗೆ ತಜ್ಞರ ಸಲಹೆ ಪರಿಗಣಿಸಿ ಕ್ರಮ: ಸಚಿವ ಕೃಷ್ಣ ಭೈರೇಗೌಡ

ಹೊಸದಿಗಂತ ವರದಿ,ಕಾರವಾರ:

ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯಾಚರಣೆಗೆ ಸರ್ಕಾರದಿಂದ ಏನೆಲ್ಲಾ ಪ್ರಯತ್ನಗಳನ್ನು ಮಾಡಬೇಕಿತ್ತೋ ಅದೆಲ್ಲವನ್ನೂ ಮಾಡಲಾಗಿದೆ ಆದರೂ ಸ್ಥಳೀಯ ಇಬ್ಬರ ಮೃತ ದೇಹಗಳು ಪತ್ತೆ ಆಗದಿರುವ ಕುರಿತು ತುಂಬಾ ನೋವಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಸರ್ವ ಪ್ರಯತ್ನಗಳನ್ನು ನಡೆಸಿದೆ ಕೇರಳದಲ್ಲಿ ಸಂಭವಿಸಿದ ಭೂ ಕುಸಿತದಲ್ಲೂ ಇದುವರೆಗೆ ಹಲವಾರು ಜನರ ಮೃತ ದೇಹಗಳು ಪತ್ತೆಯಾಗಿಲ್ಲ. ಶಿರೂರು ಶೋಧ ಕಾರ್ಯಾಚರಣೆಗೆ ಮುಂದಿನ ದಿನಗಳಲ್ಲಿ ತಜ್ಞರಿಂದ ಯಾವುದೇ ರೀತಿಯ ಸಲಹೆಗಳು ಬಂದರೂ ಅದನ್ನು ಪರಿಗಣಿಸಿ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸರ್ಕಾರ ಸಿದ್ಧವಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!