ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದಾಗಿ ವಿಪಕ್ಷಗಳು ಲೋಕಸಭೆಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಾಣದಲ್ಲೀಗ ಭಾರಿ ಟ್ರೋಲ್ ಆಗ್ತಿದ್ದಾರೆ. ಅದಕ್ಕೆ ಕಾರಣ, ಲೋಕಸಭೆಯಲ್ಲಿ ತಮ್ಮ ಬ್ಯಾಗ್ ಕೆಳಕ್ಕೆ ಇಟ್ಟಿರುವುದು.
ವಿಪಕ್ಷಗಳು ಲೋಕಸಭೆಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದವು. ಈ ಸಂದರ್ಭದಲ್ಲಿ ಟಿಎಂಸಿಯ ಕಾಕೋಲಿ ಘೋಷ್ ದಸ್ತಿದಾರ್ ಅವರು ಭಾರಿ ಜೋಶ್ನಲ್ಲಿ ಬೆಲೆ ಏರಿಕೆ ಕುರಿತು ಮಾತನಾಡುತ್ತಿದ್ದರು. ಇಂದಿನ ಬೆಲೆ ಏರಿಕೆಯಿಂದಾಗಿ ಯಾವ ವಸ್ತುಗಳನ್ನೂ ಕೊಂಡುಕೊಳ್ಳುವುದು ಅಸಾಧ್ಯವಾಗಿದೆ. ದುಬಾರಿ ವಸ್ತುಗಳು ದೂರದ ಮಾತು, ದಿನನಿತ್ಯದ ವಸ್ತುಗಳನ್ನೂ ಕೊಂಡುಕೊಳ್ಳುವುದು ಕಷ್ಟವಾಗಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.
ಈ ಸಂದರ್ಭ ಇವರ ಮೇಲೆ ಸಹಜವಾಗಿ ಕ್ಯಾಮೆರಾ ಫೋಕಸ್ ಆಗಿತ್ತು. ಅವರು ಹೀಗೆ ಮಾತನಾಡುತ್ತಿದ್ದಂತೆಯೇ ಅವರ ಪಕ್ಕದಲ್ಲಿ ಕುಳಿತಿದ್ದ ಸಂಸದೆ ಮಹುವಾ ಮೊಯಿತ್ರಾ ತಮ್ಮ ಪಕ್ಕದಲ್ಲಿ ಇಟ್ಟುಕೊಂಡಿದ್ದ ಬ್ಯಾಗ್ ಅನ್ನು ನಿಧಾನವಾಗಿ ಯಾರಿಗೂ ಕಾಣಿಸದಂತೆ ಕೆಳಕ್ಕಿಟ್ಟರು. ಇದಕ್ಕೆ ಕಾರಣ, ಅವರ ಈ ಹ್ಯಾಂಡ್ಬ್ಯಾಗ್ ಒಂದೂವರೆ ಲಕ್ಷ ರೂಪಾಯಿ ಬೆಲೆಬಾಳುವುದ್ದಾಗಿತ್ತು…
@MahuaMoitra hiding her $2500 ( 2,00,000) louis vuitton bag during price rise debate..😂😂@PoliticalKida @ARanganathan72 @smitadeshmukh @Spoof_Junkey @delhichatter @ pic.twitter.com/D82a9ph2HM
— JaiShriRam ©️ (@thesaviour78) August 1, 2022
ಅಸಲಿಗೆ ಅವರು ಸುಮ್ಮನೇ ಇದ್ದಿದ್ದರೆ ಬಹುಶಃ ಯಾರಿಗೂ ಅವರ ಹ್ಯಾಂಡ್ಬ್ಯಾಗ್ ಅಥವಾ ಅದರ ಬೆಲೆ ಕುರಿತು ಗಮನ ಹೋಗುತ್ತಿರಲಿಲ್ಲವೇನೋ. ಆದರೆ ಅವರು ಬ್ಯಾಗ್ ಕೆಳಗಿಟ್ಟು ಅದನ್ನು ಜಗಜ್ಜಾಹೀರಮಾಡಿ ಈಗ ಟ್ರೋಲ್ ಆಗುತ್ತಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳು ಬರುತ್ತಿವೆ.