ಹೊಸದಿಗಂತ ಡಿಜಿಟಲ್ ಡೆಸ್ಕ್:
ಯತ್ನಾಳ್ ನೂರಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಈಗ ಚೌಕಟ್ಟು ಮೀರಿ ಮಾತನಾಡಿದ್ದೆ ಅವರಿಗೆ ಮುಳುವಾಯಿತು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ರಾವಣ ಬಹಳ ಒಳ್ಳೆಯವನಿದ್ದ. ಹೀಗಾಗಿಯೇ ಆತ ಆತ್ಮಲಿಂಗ ಪಡೆಯಲು ಯಶಸ್ವಿಯಾಗಿದ್ದ. ಆದರೆ, ಸೀತಾಮಾತೆ ಅಪಹರಣ ಮಾಡಿ ಕೆಟ್ಟ. ಇದರಿಂದ ರಾವಣನ ಒಳ್ಳೆಯ ಕೆಲಸಗಳೆಲ್ಲ ಗೌಣವಾದವು. ಅದೇ ರೀತಿ ಯತ್ನಾಳ್ ಕೂಡ, ನೂರಾರು ಒಳ್ಳೆಯ ಕೆಲಸ ಮಾಡಿದ್ರು ಅವರ ಬಾಯಿ ಒಂದೇ ಸಮಸ್ಯೆ ಇರುವುದು ಎಂದರು.
ಮುರುಗೇಶ್ ನಿರಾಣಿ ಬಿಜೆಪಿ ಅಧ್ಯಕ್ಷರಾಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿ.ವೈ. ವಿಜಯೇಂದ್ರ ಸದ್ಯ ರಾಜ್ಯಾಧ್ಯಕ್ಷ ಇದ್ದಾರೆ. ಮುಂದಿನ ಒಂದೂವರೆ ವರ್ಷ ಅವರೇ ಇರುತ್ತಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದರು.
ಯತ್ನಾಳ್ ಮರಳಿ ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಅದು ನಮ್ಮ ಕೈಯಲ್ಲಿ ಇಲ್ಲ. ಅದನ್ನು ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದರು.