ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಷ್ಟೇ ಡೇಟಿಂಗ್ ಆರಂಭಿಸಿರುವ ಫೇಮಸ್ ಜೋಡಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಮಾಲ್ಡೀವ್ಸ್‌ನಲ್ಲಿ ವೆಕೇಷನ್ಸ್ ಕಳೆದಿದ್ದಾರೆ.
ತಮನ್ನಾ ವಿಜಯ್ ನನಗೆ ಪರ್ಫೆಕ್ಟ್ ಎಂದು ಹೇಳಿಕೊಂಡು ತಮ್ಮ ರಿಲೇಷನ್‌ಶಿಪ್ ಅಫೀಶಿಯಲ್ ಮಾಡಿದ್ದರು. ವೆಕೇಷನ್ ಮುಗಿಸಿ ವಾಪಾಸಾದ ಜೋಡಿಗೆ ಪ್ರಶ್ನೆಯೊಂದು ಎದುರಾಗಿದ್ದು ವಿಜಯ್ ವರ್ಮಾ ಗರಂ ಆಗಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ತಮನ್ನಾ ಜೊತೆ ಎಂಜಾಯ್ ಮಾಡಿದ್ರಾ? ಮೋಜು ಮಸ್ತಿ, ಊಟ, ಸ್ಥಳ ಹೇಗಿತ್ತು ಎಂದು ಪ್ರಶ್ನಿಸಿದ್ದಕ್ಕೆ ವಿಜಯ್‌ಗೆ ಸಿಟ್ಟು ಬಂದಿದೆ.
ಈ ರೀತಿ ನೀವು ಮಾತನಾಡೋ ಹಾಗಿಲ್ಲ ಎಂದು ಖಡಕ್ ಆಗಿ ವಿಜಯ್ ಹೇಳಿದ್ದಾರೆ. ಪರ್ಸನಲ್ ಲೈಫ್‌ಗೆ ಒಂಚೂರು ಸ್ಪೇಸ್ ನೀಡದೇ ಎಲ್ಲವನ್ನೂ ಪ್ರಶ್ನಿಸ್ತಾರೆ ಎನ್ನೋದು ವಿಜಯ್ ವಾದವಾಗಿದೆ.