ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿ ಆಗಿ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದ್ದು, ಸುಮಾರು ಆರು ಕೋಟಿ ರೂಪಾಯಿ ಹಣ ನೀಡಿ ಅವರನ್ನು ರಾಯಭಾರಿಯನ್ನಾಗಿಸಲಾಗಿದೆ. ಈ ಕುರಿತು ಹಲವರು ಟೀಕೆ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೀಗ ನಟಿ ಕಾರುಣ್ಯ ರಾಮ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಮೈಸೂರ್ ಸ್ಯಾಂಡಲ್ ಸೋಪ್ ಕನ್ನಡಿಗರ ಹೆಮ್ಮೆಯ ಉತ್ಪನ್ನ. ಇಂಥಾ ಉತ್ಪನ್ನದ ಪ್ರಚಾರಕ್ಕೆ ಕನ್ನಡದ ಒಬ್ಬ ನಟಿ ಸಿಗಲಿಲ್ವಾ..? ಪರಭಾಷೆಯ ನಟಿಯಿಂದಲೇ ಪ್ರಚಾರ ಬೇಕಾ..? ಕನ್ನಡದಲ್ಲಿ ಪ್ರತಿಭೆಗಳಿಗೆ ಕೊರತೆ ಇದೆಯಾ..? ದಯಮಾಡಿ ನಮ್ಮ ನಾಡಿನ ಪ್ರತಿಭೆಗಳಿಗೆ ಮೊದಲ ಆದ್ಯತೆ ಕೊಡಿ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರ ಜೊತೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೂಡ ಈ ಕುರಿತು ಪೋಸ್ಟ್ ಮಾಡಿದ್ದು, ಈ ಒಂದು ಸೋಪ್‌ಗೆ ರಾಯಭಾರಿಗಳೇ ಬೇಕಿಲ್ಲ. ಇದಕ್ಕೆ ಸುಮ್ನೆ ದುಡ್ಡು ವೇಸ್ಟ್ ಮಾಡಿದಂತೇನೆ ಬಿಡಿ. ಕಾರಣ, ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರತಿ ಕನ್ನಡಿಗರೂ ರಾಯಭಾರಿಗಳೇ ಆಗಿದ್ದಾರೆ ಎಂದು ಇನ್ಸ್ಟಾ ಸ್ಟೋರಿ ಹಾಕಿದ್ದಾರೆ.