ಮೈಸೂರು ಸ್ಯಾಂಡಲ್ ಸೋಪ್‌ ನ ರಾಯಭಾರಿಯಾಗಿ ತಮನ್ನಾ ಆಯ್ಕೆ ಸರಿಯಿಲ್ಲ: ಸಚಿವ ಜಮೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಸ್ಯಾಂಡಲ್ ಸೋಪ್‌ ನ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಆಯ್ಕೆಗೆ ಸ್ಯಾಂಡಲ್ ವುಡ್ ನ ನಟಿಯರು ಅಪಸ್ವರ ಎತ್ತಿದ್ದು, ಆದ್ರೆ ಸರಕಾರದ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ. ಇದರ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ತಮನ್ನಾ ರಾಯಭಾರಿಯಾಗಿ ಆಯ್ಕೆ ಸರಿಯಿಲ್ಲ. ನಮ್ಮ ರಾಜ್ಯದವರನ್ನೇ ಮಾಡಬೇಕು ಎಂದು ಸಾಕಷ್ಟು ಜನರ ಅಭಿಪ್ರಾಯ. ನನ್ನ ಅಭಿಪ್ರಾಯ ಕೂಡ ಅದೇ ಇದೆ ಎಂದು ಹೇಳಿದ್ದಾರೆ.

ಈ ಕುರಿತು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಲು ನಮ್ಮ ರಾಜ್ಯದಲ್ಲೇ ಬಹಳಷ್ಟು ಜನ ನಟಿಯರು ಇದ್ದರು, ಅವರಲ್ಲೇ ಒಬ್ಬರನ್ನು ರಾಯಭಾರಿಯಾಗಿ ಮಾಡಬಹುದಿತ್ತು ಎಂದರು.

ತಮನ್ನಾರನ್ನು ಆಯ್ಕೆ ಮಾಡಿದ್ದು ಜಮೀರ್ ಎಂಬ ಬಿವೈ ವಿಜಯೇಂದ್ರ ಆರೋಪಕ್ಕೆ, ವಿಜಯೇಂದ್ರ ನಮ್ಮ ಜೊತೆ ಬಂದಿದ್ರಾ ಆಯ್ಕೆ ಮಾಡೋಕೆ ಎಂದು ಗರಂ ಆದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!