ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ತಮಿಳು ನಟ ಜಯಂ ರವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳಿನ ನಟ ಜಯಂ ರವಿ ನಿರ್ಮಾಪಕರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.

ರವಿ ಮೋಹನ್ ಅಲಿಯಾಸ್ ಜಯಂ ರವಿ ಅವರು ಸಿನಿಮಾ ನಿರ್ಮಾಣ ಸಂಸ್ಥೆ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಎರಡೂ ಸಿನಿಮಾ ನಿರ್ಮಾಣ ಸಂಸ್ಥೆಗಳು ತಮಗೆ 9 ಕೋಟಿ ರೂಪಾಯಿ ಹಣವನ್ನು ಪರಿಹಾರ ಮೊತ್ತವನ್ನಾಗಿ ನೀಡಬೇಕು ಎಂದು ರವಿ ಮೋಹನ್ ನ್ಯಾಯಾಲಯದಲ್ಲಿ ಹಾಕಿರುವ ಅರ್ಜಿಯಲ್ಲಿ ಕೋರಿದ್ದಾರೆ.

ನಟ ರವಿ ಮೋಹನ್ ಅವರು ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 80 ದಿನಗಳ ಕಾಲ್ ಶೀಟ್ ಅನ್ನು ನೀಡಿದ್ದರಂತೆ. ಆದರೆ ಆ ನಿರ್ಮಾಣ ಸಂಸ್ಥೆ ಒಪ್ಪಂದದ ಪ್ರಕಾರ ಸಿನಿಮಾ ನಿರ್ಮಾಣ ಪ್ರಾರಂಭವನ್ನೇ ಮಾಡಲಿಲ್ಲ. ರವಿ ಮೋಹನ್ 80 ದಿನಗಳ ಕಾಲ್ ಶೀಟ್ ಅದಾಗಲೇ ಕೊಟ್ಟಿದ್ದ ಕಾರಣ ಬೇರೆ ಸಿನಿಮಾಗಳಲ್ಲಿ ಸಹ ರವಿ ಮೋಹನ್​ಗೆ ನಟಿಸಲು ಸಾಧ್ಯವಾಗಲಿಲ್ಲ. ಇದೇ ವರ್ಷದ ಜನವರಿ ತಿಂಗಳಲ್ಲಿ ರವಿ ಅವರು ನಿರ್ಮಾಣ ಸಂಸ್ಥೆಗೆ 80 ದಿನದ ಡೇಟ್ಸ್ ನೀಡಿದ್ದಾರೆ. ಆ ಸಮಯದಲ್ಲಿ ಇನ್ನೂ ಎರಡು ಸಿನಿಮಾಗಳು ಅವರಿಗೆ ಆಫರ್ ಆಗಿದ್ದವು, ಆದರೆ ಡೇಟ್ಸ್ ಕೊಟ್ಟುಬಿಟ್ಟಿದ್ದರ ಕಾರಣಕ್ಕೆ ಸಿನಿಮಾನಲ್ಲಿ ನಟಿಸಲಿಲ್ಲ.

ಹೀಗಾಗಿ ನಿರ್ಮಾಣ ಸಂಸ್ಥೆಯು ಸುಳ್ಳು ಭರವಸೆ ನೀಡಿ, ಸಿನಿಮಾ ಮಾಡುವುದಾಗಿ ಮೋಸ ಮಾಡಿದೆ. ಇದರಿಂದ ತಮ್ಮ ಅಮೂಲ್ಯ 80 ದಿನಗಳು ಹಾಳಾಗಿದ್ದು, ಇದರಿಂದ ತಮಗೆ ಕೋಟ್ಯಂತರ ರೂಪಾಯಿ ಹಣ ನಷ್ಟ ಉಂಟಾಗಿದೆ ಎಂದು ಆರೋಪಿಸಿ, ಇದಕ್ಕೆ ಪರಿಹಾರವಾಗಿ 9 ಕೋಟಿ ರೂಪಾಯಿ ಮೊತ್ತವನ್ನು ತಮಗೆ ಕೊಡಿಸಿಕೊಡಬೇಕು ಎಂದು ರವಿ ಮೋಹನ್ ಮದ್ರಾಸ್ ಹೈಕೋರ್ಟ್​​ನಲ್ಲಿ ಅರ್ಜಿ ಹಾಕಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!