ತಮಿಳು ನಟ ಕಮಲ್ ಹಾಸನ್ ಗೆ ಪೋಷಕ ನಟನಿಂದ ಕೊಲೆ ಬೆದರಿಕೆ: ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ಕಮಲ್ ಹಾಸನ್ ಗೆ ಯೂಟ್ಯೂಬ್‌ನಲ್ಲಿ ಬೆದರಿಕೆ ಹೇಳಿಕೆ ನೀಡಿದ ಪೋಷಕ ನಟ ರವಿಚಂದ್ರನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಮಕ್ಕಳ್ ನೀಧಿ ಮೈಯಂ ಪರವಾಗಿ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.

ನಟ ಸೂರ್ಯ ಅವರ ಅಗರಂ ಫೌಂಡೇಶನ್‌ನ 15 ನೇ ವಾರ್ಷಿಕೋತ್ಸವದ ನೆನಪಿಗಾಗಿ ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಒಂದು ಅದ್ದೂರಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ವೇಳೆ ಕಮಲ್ ಹಾಸನ್ , ಕಾರ್ಯಕ್ರಮದಲ್ಲಿ ಸನಾತನಂ ಬಗ್ಗೆ ಮಾತನಾಡಿದ್ದರು.ಶಿಕ್ಷಣವು “ಸರ್ವಾಧಿಕಾರ ಮತ್ತು ಸನಾತನದ ಸಂಕೋಲೆಗಳನ್ನು” ಕಿತ್ತೊಗೆಯುವ ಏಕೈಕ ಅಸ್ತ್ರವಾಗಿದೆ ಎನ್ನುವ ಮೂಲಕ ವಿವಾದ ಉಂಟು ಮಾಡಿದ್ದರು. ನಿಮ್ಮ ಕೈಯಲ್ಲಿ ಶಿಕ್ಷಣದ ಹೊರತಾಗಿ ಯಾವುದನ್ನೂ ತೆಗೆದುಕೊಳ್ಳಬೇಡಿ. ಶಿಕ್ಷಣವಿಲ್ಲದೆ ನಮಗೆ ಗೆಲುವಿಲ್ಲ. ಮೂರ್ಖರು ನಿಮ್ಮನ್ನು ಮೂರ್ಖರನ್ನಾಗಿ ಮಾಡಬಹುದು. ಶಿಕ್ಷಣ ಮಾತ್ರ ಅದನ್ನು ಸೋಲಿಸಲು ಸಾಧ್ಯ. ಅದಕ್ಕೆ ನಾವು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು” ಎಂದಿದ್ದರು.

ಬಳಿಕ ಪೋಷಕ ನಟ ರವಿಚಂದ್ರನ್ ಯೂಟ್ಯೂಬ್‌ನಲ್ಲಿ ಕಮಲ್ ಹಾಸನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಧ್ವನಿಯಲ್ಲಿ ಮಾತನಾಡಿದ್ದರು.

ಇದೀಗ ಕಮಲ್ ಹಾಸನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಪೋಷಕ ನಟ ರವಿಚಂದ್ರನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೌರ್ಯ, ಯುವ ವಿಭಾಗದ ರಾಜ್ಯ ಕಾರ್ಯದರ್ಶಿ ಮತ್ತು ಕವಿ ಸ್ನೇಹನ್ ಮತ್ತು ಇತರರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!