ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟಿ ಶ್ರುತಿ ನಾರಾಯಣನ್ ಕಾಸ್ಟಿಂಗ್ ಕೌಚ್ ವಿಡಿಯೋಗಳು ಲೀಕ್ ಆಗಿ ಬಾರಿ ಕೋಲಾಹಲ ಸೃಷ್ಟಿಸಿದೆ.ನಟಿ ವಿಡಿಯೋ ಎನ್ನಲಾದ ಈ ಹಸಿಬಿಸಿ ದೃಶ್ಯಗಳು ಹಲವು ತಾಣಗಳ ಮೂಲಕ ಹರಿದಾಡುತ್ತಿದೆ.
14 ನಿಮಿಷಗಳ ಈ ವಿಡಿಯೋ ತುಣುಕು ವೈರಲ್ ಆದ ಬಳಿಕ ನಟಿ ಶ್ರುತಿ ನಾರಾಯಣ್ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿಟ್ಟುಕೊಂಡಿದ್ದಾರೆ.
ತಮ್ಮ ವಿಡಿಯೋ ವೈರಲ್ ಆಗುತ್ತಿದ್ದಂತೆ ತಮ್ಮ ಇನ್ಸ್ಟಾಗ್ರಾಂನ ಖಾತೆಯನ್ನು ಪ್ರೈವೇಟ್ ಮಾಡಿಕೊಂಡಿರುವ ನಟಿ, ತಮ್ಮ ಚಿತ್ರಗಳಿಗೆ ಯಾರೂ ಕಮೆಂಟ್ ಮಾಡದಂತೆ ಮಾಡಿದ್ದಾರೆ.
ಇತ್ತ ವಿಡಿಯೋ ವೈರಲ್ ಆದ ಬಳಿಕ ಇಂದು (ಮಾರ್ಚ್ 27) ಮಧ್ಯಾಹ್ನ ತಮ್ಮ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರಗಳನ್ನು ಸಹ ಪ್ರೈವೇಟ್ ಮಾಡಿರಿಸಿಕೊಂಡಿದ್ದಾರೆ .
ಶ್ರುತಿ ನಾರಾಯಣ್, ಕೆಲವು ಧಾರಾವಾಹಿ ಹಾಗೂ ಕೆಲವು ಜನಪ್ರಿಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ಸೂಪರ್ ಹಿಟ್ ಧಾರಾವಾಹಿ ‘ಕಾರ್ತಿಕ ದೀಪಂ’ನಲ್ಲಿ ಶ್ರುತಿ ನಾರಾಯಣ್ ನಟಿಸಿದ್ದಾರೆ. ಅದರ ಹೊರತಾಗಿ ‘ಮಾರಿ’ ಸಿನಿಮಾದಲ್ಲಿಯೂ ಶ್ರುತಿ ನಟಿಸಿದ್ದರು. ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ವೆಬ್ ಸರಣಿ ‘ಸಿಟಾಡೆಲ್: ಹನಿ ಬನಿ’ಯಲ್ಲಿಯೂ ಸಹ ಶ್ರುತಿ ನಾರಾಯಣ್ ನಟಿಸಿದ್ದು ಮಾತ್ರವೇ ಅಲ್ಲದೆ ನಟನೆಗೆ ಒಟಿಟಿ ಅವಾರ್ಡ್ ಸಹ ಪಡೆದುಕೊಂಡಿದ್ದಾರೆ.