ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸಿನಿಮಾ ನಿರ್ದೇಶಕ ವಿಕ್ರಮ್ ಸುಗುಮಾರನ್ (47) ಅವರು ಕಾರ್ಡಿಕ್ ಅರೆಸ್ಟ್ (ಹೃದಯ ಸ್ತಂಭನ)ನಿಂದ ನಿಧನ ಹೊಂದಿದ್ದಾರೆ.
ನಿರ್ದೇಶಕ ವಿಕ್ರಮ್ ಸುಗುಮಾರನ್ ಅವರು ತಮಿಳುನಾಡಿನ ಮಧುರೈನಲ್ಲಿ ಇಂದು ಬೆಳಗ್ಗೆ ನಿರ್ಮಾಪಕರೊಬ್ಬರಿಗೆ ಸಿನಿಮಾದ ಸ್ಕ್ರಿಪ್ಟ್ ಹೇಳಿ ವಾಪಸ್ ಆಗುತ್ತಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
ತ ನಿರ್ದೇಶಕ ಬಾಲು ಮಹೇಂದ್ರ ಅವರ ಬಳಿ 1999 ರಿಂದ 2000ರವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದಿದ್ದರು.
2013ರಲ್ಲಿ ಇವರ ಮೊದಲ ನಿರ್ದೇಶನದಲ್ಲಿ ತೆರೆಗೆ ಅಪ್ಪಳಿಸಿದ್ದ ಮಧ ಯಾನೈ ಕೂಟ್ಟಾಮ್ ಸಿನಿಮಾ ಯಶಸ್ವಿ ಪ್ರದರ್ಶನಗೊಂಡಿತ್ತು. ಈ ಸಿನಿಮಾದಲ್ಲಿ ಕಥೈರ್ ಅಭಿನಯ ಮಾಡಿದ್ದರು. 2023ರಲ್ಲಿ ರಾವಣ ಕೊಟ್ಟಂ ಎನ್ನವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ನಟ ಶಂತನು ಭಾಗ್ಯರಾಜ್ ಈ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ತೇರಮ್ ಪೋರಮ್ ಎನ್ನುವ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದರು. ಆದರೆ ಇದರ ಮಧ್ಯೆ ನಿಧನ ಹೊಂದಿದ್ದಾರೆ.