ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳಿಗೆ ತಮಿಳುನಾಡು ರಾಜ್ಯಪಾಲರು ಅಂಕಿತ ಹಾಕದೇ ಬಾಕಿ ಉಳಿಸಿಕೊಳ್ಳುವುದರ ವಿರುದ್ಧ ಸುಪ್ರೀಂಕೋರ್ಟ್ ಇತ್ತೀಚೆಗೆ ಚಾಟಿ ಬೀಸಿದ್ದು, ಇದೀಗ ರಾಜ್ಯಪಾಲ ರವಿ ಅವರು ಹತ್ತು ಮಸೂದೆಗಳಲ್ಲಿ ಹಿಂದಿರುಗಿಸಿದ್ದಾರೆ.
ತಮಿಳುನಾಡು ಸರ್ಕಾರ ರಾಜ್ಯಪಾಲರ ವಿಳಂಬ ಧೋರಣೆ ಪ್ರಶ್ನಿಸಿ, ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್ ಅಭಿವೃದ್ಧಿ ಮಸೂದೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ ರಾಜ್ಯಪಾಲರ ನಡೆಯನ್ನೂ ಟೀಕಿಸಿತ್ತು. ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಏಕೆ ತಡೆಹಿಡಿಯುತ್ತಾರೆ ಎಂದು ಕೇಳಿತ್ತು.
ಸುಪ್ರೀಂಕೋರ್ಟ್ ಕಳವಳದ ಬಳಿಕ ರಾಜ್ಯಪಾಲ ಆರ್.ಎನ್.ರವಿ ಅವರು ಹತ್ತು ಮಸೂದೆಗಳಲ್ಲಿ ಹಿಂದಿರುಗಿಸಿದ್ದಾರೆ. ಇದರಲ್ಲಿ ಈ ಹಿಂದಿನ ಎಐಎಡಿಎಂಕೆ ಸರ್ಕಾರ ಅಂಗೀಕರಿಸಿದ್ದ ಎರಡು ಮಸೂದೆಗಳೂ ಇದರಲ್ಲಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ಸ್ಪೀಕರ್ ಎಂ.ಅಪ್ಪಾವು ಅವರು ಶನಿವಾರ (ನವೆಂಬರ್ 18) ವಿಶೇಷ ಅಧಿವೇಶನ ಕರೆದಿದ್ದಾರೆ. ಇದರಲ್ಲಿ ಡಿಎಂಕೆ ಸರ್ಕಾರ ವಾಪಸ್ ಬಂದ ಮಸೂದೆಗಳನ್ನು ಮತ್ತೊಮ್ಮೆ ಅಂಗೀಕರಿಸಿ, ಪುನಃ ರಾಜ್ಯಪಾಲರಿಂದ ಅನುಮೋದನೆಗೆ ಕಳುಹಿಸುವ ನಿರೀಕ್ಷೆ ಇದೆ.