ಹೊಸದಿಗಂತ ಡಿಜಿಟಲ್‌ಡೆಸ್ಕ್:
ಮಿಚಾಂಗ್ ಚಂಡಮಾರುತಕ್ಕೆ ತಮಿಳುನಾಡು ಅಕ್ಷರಶ ನಲುಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಈ ಹಿನ್ನೆಲೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಬುಧವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ತಕ್ಷಣ ಮಧ್ಯಂತರ ಪರಿಹಾರವಾಗಿ 5,060 ಕೋಟಿ ರೂ. ನೀಡುವಂತೆ ಪ್ರಧಾನಿಗೆ ಕೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಚಂಡಮಾರುತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಕೇಂದ್ರ ತಂಡವನ್ನು ಕಳುಹಿಸುವಂತೆ ಮನವಿ ಸಲ್ಲಿಸಿದ್ದಾರೆ.
ನಮ್ಮನ್ನು ಸುತ್ತುವರಿದಿರುವ ಮಿಚಾಂಗ್ ಚಂಡಮಾರುತದ ದುಷ್ಪರಿಣಾಮಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರು, ಅಧಿಕಾರಿಗಳು, ಪೊಲೀಸರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಕಾರ್ಪೊರೇಷನ್ ಕಾರ್ಮಿಕರನ್ನೊಳಗೊಂಡ ಇಡೀ ಸರ್ಕಾರ ಶ್ರಮಿಸುತ್ತಿದೆ. ಇನ್ನೂ ಅನೇಕ ಸಹೋದ್ಯೋಗಿಗಳು ತಕ್ಷಣ ಪರಿಹಾರಕ್ಕೆ ಕೈಜೋಡಿಸಬೇಕು ಎಂದು ನಾನು ವಿನಂತಿಸುತ್ತೇನೆ. ಕ್ಷೇತ್ರದಲ್ಲಿ ಸಹಾಯ ಮಾಡುವ ಕ್ಲಬ್‌ನ ಸದಸ್ಯರೊಂದಿಗೆ ಕೆಲಸ ಮಾಡಿ. ಪೀಡಿತ ಪ್ರದೇಶಗಳ ಸದಸ್ಯರು ಬೇಗನೆ ಬನ್ನಿ ಎಂದು ಎಕ್ಸ್‌ನಲ್ಲಿ ಸ್ಟಾಲಿನ್ ಪೋಸ್ಟ್ ಹಾಕಿದ್ದಾರೆ.
ಮಿಚಾಂಗ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯ ನಂತರ ಚೆನ್ನೈನಲ್ಲಿ ಪ್ರವಾಹವು ಇಲ್ಲಿಯವರೆಗೆ 17 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.