ಹೊಸದಿಗಂತ ಡಿಜಿಟಲ್ ಡೆಸ್ಕ್
ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಕೊಳಕು ಮಂಡಲ ಹಾವಿನಿಂದ ನಾಲಿಗೆ ಕಚ್ಚಿಸಿಕೊಂಡ ರೈತನೊಬ್ಬ ತನ್ನ ನಾಲಿಗೆಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ಚನ್ನೈ ನಲ್ಲಿ ನಡೆದಿದೆ.
ಕಾಪಿಚೆಟ್ಟಿ ಪಾಳ್ಯಂನ ನಿವಾಸಿ ರಾಜಾ (54) ಎಂಬಾತನಿಗೆ ಆಗಾಗ ಹಾವು ಕಚ್ಚುವ ಕನಸು ಬೀಳುತ್ತಿತ್ತು. ಇದರಿಂದಾಗಿ ರಾಜ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಜ್ಯೋತಿಷಿ ರಾಜನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಲು ತಿಳಿಸಿದ್ದಾರೆ. ಆ ಆಚರಣೆಗಳಲ್ಲಿ ಹಾವಿನ ಬಳಿ ನಾಲಿಗೆ ಚಾಚುವುದು ಒಂದಾಗಿತ್ತು. ಜ್ಯೋತಿಷಿಗಳ ಸಲಹೆಯ ಮೇರೆಗೆ ರಾಜ ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ಅದಾದ ಬಳಿಕ ರಾಜ ಕೊಳಕುಮಂಡಲದ ಮುಂದೆ ಮೂರು ಬಾರಿ ನಾಲಿಗೆಯನ್ನು ಚಾಚಿದ್ದಾನೆ. ಈ ವೇಳೆ ವಿಷಕಾರಿ ಹಾವು ಅವನ ನಾಲಿಗೆಯನ್ನು ಕ್ಷಣಮಾತ್ರದಲ್ಲಿ ಕಚ್ಚಿತು.
ದೇವಸ್ಥಾನದ ಅರ್ಚಕರು ಕೂಡಲೇ ನಾಲಿಗೆಯನ್ನು ತುಂಡರಿಸಿ ಈರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗ ವ್ಯಕ್ತಿಯೂ ಪ್ರಜ್ಞೆ ತಪ್ಪಿ ಬಿದ್ದಿದ್ದ.
ಮಣಿಯನ್ ಮೆಡಿಕಲ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್ ಮಾತನಾಡಿ, ವೈದ್ಯರು ರಾಜಾ ಅವರ ಕತ್ತರಿಸಿದ ನಾಲಿಗೆಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ ಮತ್ತು ಹಾವಿನ ವಿಷಕ್ಕೆ ಪ್ರತಿವಿಷವನ್ನೂ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ