ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ತಮಿಳು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ.
ತಮಿಳುನಾಡು ಶಾಸಕರ ಪುತ್ರ ಪ್ರವೀಣ್ & ಗ್ಯಾಂಗ್ ಚೇರನ್ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು, ಪ್ರವೀಣ್ ಗ್ಯಾಂಗ್ನಲ್ಲಿ ರಾಕೇಶ್, ಸುನೀಲ್, ಕಾರ್ತಿಕ್, ಫರ್ಜಿನ್, ಗೌರವ್ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಕಾಲೇಜಿನ ವಾರ್ಷಿಕೋತ್ಸವದ ವೇಳೆ ಗಲಾಟೆ ನಡೆದಿದ್ದು, ಪೊಲೀಸರ ಒಪ್ಪಿಗೆ ಇಲ್ಲದೇ ನೈಟ್ ಡಿಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಲಾಟೆ ಕುರಿತು ಆನೇಕಲ್ ಪೊಲೀಸರಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಅಂದ್ಹಾಗೆ, ಅತ್ಯಾಚಾರ ಕೇಸ್ವೊಂದರಲ್ಲಿ ಆರೋಪಿ ಆಗಿರುವ ಪ್ರವೀಣ್, ಅಲಯನ್ಸ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.