ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗುತ್ತಲೇ ಇದೆ. ಇಂಡಿಪೆಂಡೆಂಟ್ ಮನೆಗಳು ಕೂಡ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ನೀರು ಸಿಗದೇ ಅವರೂ ಪರದಾಡುವಂತಾಗಿದೆ.
ಕಾವೇರಿ ನೀರಿನ ಪೂರೈಕೆ ಕಡಿಮೆಯಾಗಿದ್ದು, ಬೋರ್‌ವೆಲ್‌ಗಳು ಸಂಪೂರ್ಣ ಬತ್ತಿ ಹೋಗಿವೆ. ಇದರಿಂದಾಗಿ ಎಲ್ಲರೂ ಟ್ಯಾಂಕರ ನೀರಿಗಾಗಿ ಕಾಯುತ್ತಾರೆ. ಆದರೆ ಟ್ಯಾಂಕರ್‌ಗಳು ಒಂದೇ ಮನೆಗೆ ನೀರು ನೀಡಲು ಬಾರದೆ ಅಪಾರ್ಟ್‌ಮೆಂಟ್ಸ್,ಕಮ್ಯುನಿಟಿ ಹೀಗೆ ಹೆಚ್ಚು ಮನೆಗಳಿರುವ ಕಡೆ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದಾಗಿ ಸಿಂಗಲ್ ಬ್ಯುಲ್ದಿಂಗ್ ಇರುವವರು ನೀರಿಲ್ಲದೆ ಪರದಾಡುತ್ತಿದ್ದಾರೆ.
ನೀರಿಗಾಗಿ ಟ್ಯಾಂಕರ್‌ಗೆ ಕರೆ ಮಾಡಿದಾಗ, ಮೊದಲು ರೆಗ್ಯುಲರ್ ಕಸ್ಟಮರ್‌ಗಳಿಗೆ ನೀರು ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.