ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಕಚೇರಿಯಲ್ಲಿ ಎಲ್ಲರಿಗೂ ಈ ಎಚ್ಚರಿಕೆ ಬಂದಿದೆ. ಈ ಕುರಿತಾಗಿ ಕಾಂಗ್ರೆಸ್ ಕೂಡ ಒಂದು ಲಿಸ್ಟ್ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಪವನ್ ಖೇಡಾ, ಸುಪ್ರಿಯಾ, ಪ್ರಿಯಾಂಕಾ ಸೇರಿದಂತೆ ಎಲ್ಲರಿಗೂ ಈ ರೀತಿಯ ಅಲರ್ಟ್ ಮಾಡಿದೆ. ಸರ್ಕಾರಕ್ಕೆ ಬೇಕಿದ್ದಲ್ಲಿ ನನ್ನ ಫೋನ್ ತೆಗೆದುಕೊಳ್ಳಬಹುದು. ಆದರೆ, ನಾನು ಅದಕ್ಕೆ ಹೆದರೋದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸರ್ಕಾರದ ಇಂತಹ ನಡೆ ವಿರುದ್ಧ ಬಹಳ ಕಡಿಮೆ ಜನರು ಹೋರಾಡುತ್ತಿದ್ದಾರೆ. ನೀವು ಎಷ್ಟು ಬೇಕಾದರೂ ಟ್ಯಾಪಿಂಗ್ ಮಾಡಬಹುದು, ನಾನು ಹೆದರುವುದಿಲ್ಲ, ಬೇಕಿದ್ದರೆ ನಾನೇ ನಿಮಗೆ ನನ್ನ ಫೋನ್ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.
ಸರ್ಕಾರವು ವಿಚಲಿತ ರಾಜಕೀಯದಲ್ಲಿ ತೊಡಗಿದೆ, ಸರ್ಕಾರದ ಮುಖ್ಯಸ್ಥರು ಮರೆಮಾಚುತ್ತಿದ್ದ ಸತ್ಯ ಪ್ರತಿಪಕ್ಷಗಳಿಗೆ ಗೊತ್ತಾಗಿದೆ. ದೇಶದ ಜನತೆಗೆ ಪ್ರತಿಯೊಂದು ಸತ್ಯವೂ ಅರ್ಥವಾಗುತ್ತಿದೆ. ಸರ್ಕಾರದ ಟ್ಯಾಪಿಂಗ್ ಸಹ ಯಾವುದೇ ವ್ಯತ್ಯಾಸ ತೋರಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದೇಶ ಅನುಭವಿಸುತ್ತಿರುವ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಸುಳ್ಳು ಕನಸುಗಳೇ ಮಾರಾಟವಾಗುತ್ತಿವೆ ಎಂದು ಎಚ್ಚರಿಸಿದರು.
ಈ ಹಿಂದೆ ಪ್ರಧಾನಿ ಮೋದಿ ಸರ್ಕಾರದಲ್ಲಿ ನಂ.1 ಮತ್ತು ಅಮಿತ್ ಶಾ (Amit Shah) 2ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಚಿತ್ರಣ ಬದಲಾಗಿದೆ, ಸರ್ಕಾರದಲ್ಲಿ ಅದಾನಿ ನಂಬರ್ 1, ಪಿಎಂ ಮೋದಿ 2 ಮತ್ತು ಅಮಿತ್ ಶಾ 3ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿಯವರಿಗೆ ಯಾರು ಕೆಲಸ ಕೊಡಲು ಹೊರಟಿದ್ದಾರೆ ಎಂಬ ಸತ್ಯ ಸಾರ್ವಜನಿಕರಿಗೆ ಅರ್ಥವಾಗುತ್ತದೆ. ಕೃಷಿ ಕ್ಷೇತ್ರ ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗಿದೆ, ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದಾದರೆ ಹ್ಯಾಕಿಂಗ್ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು.
ಈ ಸರ್ಕಾರದಲ್ಲಿ ಶ್ರೀಸಾಮಾನ್ಯರ ಕಡೆಗಣನೆ ಮತ್ತು ಶ್ರೀಮಂತರ ಗಣನೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸರ್ಕಾರವು ಕೆಲವು ಕೈಗಾರಿಕದ್ಯೊಮಿಗಳ ಮನೆಗಳಿಗೆ ಕೆಲಸ ಮಾಡುತ್ತದೆ. ಈ ಸರ್ಕಾರದ ಅಡಿಯಲ್ಲಿ ಹಣದುಬ್ಬರ ಉತ್ತುಂಗದಲ್ಲಿದೆ, ಜನರ ದೈನಂದಿನ ಅಗತ್ಯಗಳನ್ನು ಪೂರೈಸಲು ಅವರ ಜೇಬಿನಲ್ಲಿ ಹಣವಿಲ್ಲ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಅಷ್ಟೇ ಅಲ್ಲದೇ ದೇಶೀಯ ರಂಗದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.