ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಗಳಿಂದ ತಪ್ತ ಮುದ್ರಧಾರಣೆ

ಹೊಸದಿಗಂತ ವರದಿ ಬಳ್ಳಾರಿ:

ಆಷಾಡ ಶುದ್ದ ಮೊದಲ ಏಕಾದಶಿ ಹಿನ್ನೆಲೆ ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ಮಧ್ವ ಸಂಘದಲ್ಲಿ ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ಸಂಸ್ಥಾನ ಪೂಜೆ, ಭಕ್ತರಿಗೆ ತಪ್ತ ಮುದ್ರಧಾರಣೆ, ಸೇರಿದಂತೆ ವಿವಿಧ ಪೂಜೆಗಳು ಗುರುವಾರ ವಿಜೃಂಭಣೆಯಿಂದ ನಡೆದವು. ಇದಕ್ಕೂ ಮುನ್ನ ಶ್ರೀ ಸುದರ್ಶನ ಹೋಮ ನಡೆಯಿತು.

ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ಹೋಮ, ಹವನದಲ್ಲಿ, ತಪ್ತ ಮುದ್ರಧಾರಣೆ, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ನಗರದ ಕಪ್ಪಗಲ್ ರಸ್ತೆ ಶ್ತೀ ಕೃಷ್ಣ ಮಂದಿರ, ಸಿರಗುಪ್ಪ ರಸ್ತೆಯ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ದೇವಾಲಯಕ್ಕೆ ಸ್ವಾಮೀಜಿ ಅವರು ತೆರಳಿ ವಿಶೇಷ ಪೂಜೆ, ಭಕ್ತರಿಗೆ ತಪ್ತ ಮುದ್ರಧಾರಣೆ ನೆರವೇರಿಸಿದರು. ಸಾಮೂಹಿಕ ಶ್ರೀ ಸುದರ್ಶನ ಹೋಮ ಸೇರಿದಂತೆ ವಿವಿಧ ಪೂಜೆಗಳು ನಡೆದವು.

ಈ ಸಂದರ್ಭದಲ್ಲಿ ಪಂಡಿತರಾದ ವೇಣು ಮಾಧವಾಚಾರ್, ಪವಮಾನಾ ಆಚಾರ್, ಗೋಪಾಲಕೃಷ್ಣ ಸಾಮಗ, ಯಂತ್ರೋದ್ಧಾರಕ ಪ್ರಾಣದೇವರ ದೇಗುಲ ಪ್ರಧಾನ ಅರ್ಚಕರಾದ ಬಲರಾಮ್ ಆಚಾರ್, ಸೇರಿದಂತೆ ನೂರಾರು ಭಕ್ತರು, ವಿವಿಧ ಪಂಡಿತರು, ಶ್ರೀ ಮಧ್ವ ಸದನ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿ ಸದಸ್ಯರು, ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!