ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರಕ್ಕೆ ಚೀನಾ ತತ್ತರಿಸಿದ್ದು, ಇದರ ನಡುವೆ ಸುಂಕ ಸಮರದ ಮೊದಲ ವಾರವನ್ನು WEEK OF VICTORIES ಎಂದು ಅಮೆರಿಕದ ಅಧ್ಯಕ್ಷರ ಕಚೇರಿ ಶ್ವೇತಭವನವು ಘೋಷಿಸಿದೆ.
ಅಮೆರಿಕಕ್ಕೆ ಚೀನಾ ಪ್ರತಿ ಸುಂಕ ಹೇರಿದ್ದರೂ,ಚೀನಾದ ಆರ್ಥಿಕತೆಗೆ ಭಾರಿ ಪೆಟ್ಟು ಬೀಳುವುದು ಸಾಧ್ಯತೆ ಇದ್ದು, ಇದನ್ನು ಅರಿತುಕೊಂಡಿರುವ ಕ್ಸಿ ಜಿನ್‌ಪಿಂಗ್ (Xi Jinping) ಮತ್ತಷ್ಟು ಸಂಘರ್ಷಕ್ಕೆ ಹಿಂಜರಿಯುತ್ತಿದ್ದಾರೆ..
ಅಮೆರಿಕವು ಚೀನಾ ವಿರುದ್ಧ 145% ಸುಂಕವನ್ನು ಹೇರಿದ್ದರೆ, ಪ್ರತಿಯಾಗಿ ಚೀನಾವು ಅಮೆರಿಕದ ವಿರುದ್ಧ 125% ಸುಂಕವನ್ನು ಹೇರಿದೆ. ಇದೇ ರೀತಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕವನ್ನು ಏರಿಸಿದರೆ ಅತಿ ಹೆಚ್ಚು ನಷ್ಟ ಆಗುವುದು ಚೀನಾಕ್ಕೆ ಹೊರತು ಅಮೆರಿಕಕ್ಕೆ ಅಲ್ಲ.
ಚೀನಾದಿಂದ ಅಮೆರಿಕಕ್ಕೆ ರಫ್ತು: 440 ಶತಕೋಟಿ ಡಾಲರ್, ಅಮೆರಿಕದಿಂದ ಚೀನಾಕ್ಕೆ ರಫ್ತು: 143 ಶತಕೋಟಿ ಡಾಲರ್. ಹೀಗಾಗಿ ಒಂದು ವೇಳೆ ಚೀನಾವು ಅಮೆರಿಕಕ್ಕೆ ರಫ್ತನ್ನು ಬಹುತೇಕ ಸ್ಥಗಿತಗೊಳಿಸಿದರೆ, ಅದಕ್ಕೇ ಬಹಳ ದೊಡ್ಡ ಮೌಲ್ಯದ ವ್ಯಾಪಾರ ನಷ್ಟವಾಗುತ್ತದೆ. ಇದೇ ವೇಳೆ ಅಮೆರಿಕವು ಚೀನಾಕ್ಕೆ ರಫ್ತನ್ನು ಬಹುತೇಕ ಸ್ಥಗಿತಗೊಳಿಸಿದರೆ ಅದಕ್ಕಾಗುವ ನಷ್ಟ ಚೀನಾಕ್ಕಿಂತ ಕಡಿಮೆ.
ಒಟ್ಟಿನಲ್ಲಿ ಮಾತುಕತೆಗೆ ಯಾರು ಮೊದಲು ಬರುತ್ತಾರೆ ಎಂದು ಉಭಯ ಬಣಗಳೂ ಕಾಯುತ್ತಿವೆ. ಚೀನಾವೇ ಮೊದಲು ಬರಲಿ ಎಂದು ಟ್ರಂಪ್ ಕಾಯುತ್ತಿದ್ದರೆ, ಅಮೆರಿಕವೇ ಮುಂದೆ ಬರಲಿ ಎಂದು ಜಿನ್‌ಪಿಂಗ್ ಎದುರು ನೋಡುತ್ತಿದ್ದಾರೆ. ಸಿಎನ್‌ಎನ್ ವರದಿಯ ಪ್ರಕಾರ ಟ್ರಂಪ್ ಸರಕಾರದ ಅಧಿಕಾರಿಗಳು ಸುಮಾರು ಎರಡು ತಿಂಗಳಿನಿಂದ ಚೀನಾ ಸರಕಾರವನ್ನು ಸಂಪರ್ಕಿಸಿ, ಜಿನ್ ಪಿಂಗ್ ಅವರು ಟ್ರಂಪ್‌ಗೆ ಕರೆ ಮಾಡಿ ಮಾತುಕತೆ ನಡೆಸಲು ತಿಳಿಸಿದ್ದಾರೆ. ಆದರೆ ಇದುವರೆಗೆ ಜಿನ್‌ಪಿಂಗ್ ಫೋನ್ ಮೂಲಕ ಮಾತುಕತೆಗೆ ನಿರಾಕರಿಸಿದ್ದಾರೆ.
ಅಮೆರಿಕದ ಶ್ವೇತಭವನ ಪ್ರಕಟಿಸಿರುವ WEEK OF VICTORIES
ಚೀನಾ ವಿರುದ್ಧ 145% ಸುಂಕ ಹೇರಿಕೆ.
ಇಸ್ರೇಲ್ ಅಧ್ಯಕ್ಷ ನೇತನ್ಯಾಹು ಜತೆ ಮಾತುಕತೆ.
ಅನಿಲ ಮತ್ತು ಇಂಧನ ದರ ಇಳಿಕೆಯಾಗಿದೆ.
ಹಣದುಬ್ಬರ ಇಳಿಯುತ್ತಿದೆ.
ಕಂಪನಿಗಳು ಬಿಲಿಯನ್‌ಗಟ್ಟಲೆ ಹೂಡುತ್ತಿವೆ.