ಸುಂಕ ಸಮರ: ಅಮೆರಿಕದೊಂದಿಗಿನ ದ್ವಿಪಕ್ಷೀಯ ಮಾತುಕತೆಗೆ ಚೀನಾ ನಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದೊಂದಿಗಿನ ಪ್ರತಿಸುಂಕ ಸಮರ ಕೊನೆಗೊಳಿಸಲು ನಡೆಸುವ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಗತಿ ಸಾಧಿಸುವ ಯಾವುದೇ ಲಕ್ಷಣಗಳಿಲ್ಲ ಎಂದು ಚೀನಾ ಹೇಳಿದೆ.

ಸುಂಕ ಸಮರವನ್ನು ಅಮೆರಿಕ ಆರಂಭಿಸಿದೆ. ಈ ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ. ಅನಿವಾರ್ಯವಾದಲ್ಲಿ ಚೀನಾ ಹೋರಾಡಲಿದೆ. ಮಾತುಕತೆಗೆ ಅಮೆರಿಕ ಸಿದ್ಧವಿದ್ದರೆ ನಮ್ಮ ಬಾಗಿಲು ಸದಾ ತೆರೆದಿರುತ್ತದೆ. ಮಾತುಕತೆ ಮತ್ತು ಚರ್ಚೆಗಳು ಸಮಾನತೆ, ಗೌರವ ಮತ್ತು ಪರಸ್ಪರ ಲಾಭವನ್ನು ಆಧರಿಸಿರುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೋ ಜೈಕುನ್‌ ಹೇಳಿದ್ದಾರೆ.

ಸುಂಕದ ಕುರಿತು ಚೀನಾ ಮತ್ತು ಅಮೆರಿಕ ಯಾವುದೇ ಸಮಾಲೋಚನೆ ಅಥವಾ ಚರ್ಚೆ ನಡೆಸಿಲ್ಲ. ಇನ್ನು ಒಪ್ಪಂದ ದೂರದ ಮಾತು. ಒಂದೊಮ್ಮೆ ಈ ಸಮಸ್ಯೆಯನ್ನು ಪರಿಹರಿಸಲು ಅಮೆರಿಕ ಇಚ್ಛಿಸಿದ್ದೇ ಆದಲ್ಲಿ, ಅದು ಅಂತಾರಾಷ್ಟ್ರೀಯ ಸಮುದಾಯ ಮತ್ತು ದೇಶೀಯ ಮಧ್ಯಸ್ಥಿಕೆಗಾರರ ತರ್ಕಬದ್ಧ ಮಾತುಗಳನ್ನು ಆಲಿಸಬೇಕು. ಚೀನಾದ ಉತ್ಪನ್ನಗಳ ಮೇಲಿನ ಏಕಪಕ್ಷೀಯ ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಹಾಗೂ ಸಮಾನ ಸಂವಾದಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!