June 17, 2026
Wednesday, June 17, 2026
spot_img

FOOD | ಕಹಿ ಎಂದು ಜರಿಯಬೇಡಿ, ಹಾಗಲಕಾಯಿಯ ರುಚಿಕರ ಗೊಜ್ಜು ಹೀಗೆ ಮಾಡಿ

ಹಾಗಲಕಾಯಿ ಪಲ್ಯ ಅಥವಾ ಗೊಜ್ಜು ಕೇವಲ ಒಂದು ರುಚಿಕರವಾದ ಖಾದ್ಯವಲ್ಲ, ಇದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಮೂಲ್ಯವಾದ ಆಹಾರವಾಗಿದೆ. ಅನೇಕರು ಇದರ ಕಹಿ ಗುಣದಿಂದಾಗಿ ಇದನ್ನು ತಿನ್ನಲು ಹಿಂಜರಿಯುತ್ತಾರೆ, ಆದರೆ ಸರಿಯಾದ ಕ್ರಮದಲ್ಲಿ ತಯಾರಿಸಿದರೆ ಇದು ಅದ್ಭುತ ರುಚಿಯನ್ನು ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ
ಈರುಳ್ಳಿ
ಹುಣಸೆಹಣ್ಣಿನ ರಸ
ಬೆಲ್ಲ
ಸಾಂಬಾರ್ ಪುಡಿ / ರಸಂ ಪುಡಿ
ಎಣ್ಣೆ
ತುರಿದ ಕಾಯಿತುರಿ
ಅರಿಶಿನ ಪುಡಿ
ಉಪ್ಪು
ಒಗ್ಗರಣೆಗೆ

ಮಾಡುವ ವಿಧಾನ:
ಮೊದಲು ಹಾಗಲಕಾಯಿಯನ್ನು ಕತ್ತರಿಸಿ, ಅದಕ್ಕೆ 1 ಚಮಚ ಉಪ್ಪು ಮತ್ತು 1/2 ಚಮಚ ಅರಿಶಿನ ಹಾಕಿ ಚೆನ್ನಾಗಿ ಕಲಸಿ 15-20 ನಿಮಿಷ ಇಡಬೇಕು. ನಂತರ ಕೈಯಿಂದ ಗಟ್ಟಿಯಾಗಿ ಹಿಂಡಿ, ಅದರಿಂದ ಬರುವ ಕಹಿ ನೀರನ್ನು ಸಂಪೂರ್ಣವಾಗಿ ತೆಗೆಯಿರಿ. ಆಮೇಲೆ ಒಮ್ಮೆ ಶುದ್ಧ ನೀರಿನಲ್ಲಿ ತೊಳೆದು ಎತ್ತಿಟ್ಟುಕೊಳ್ಳಬೇಕು.

ನಂತರ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ, ಹಿಂಡಿ ಇಟ್ಟುಕೊಂಡ ಹಾಗಲಕಾಯಿ ತುಂಡುಗಳನ್ನು ಹಾಕಬೇಕು. ಬಳಿಕ ಸಣ್ಣ ಉರಿಯಲ್ಲಿ 5-8 ನಿಮಿಷಗಳ ಕಾಲ ಹಾಗಲಕಾಯಿ ಬಣ್ಣ ಬದಲಾಗಿ ಸ್ವಲ್ಪ ಗರಿಗರಿಯಾಗುವವರೆಗೆ ಚೆನ್ನಾಗಿ ಹುರಿದು ಒಂದು ತಟ್ಟೆಗೆ ಎತ್ತಿಡಬೇಕು. ಅದೇ ಬಾಣಲೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಈಗ ಕತ್ತರಿಸಿದ ಈರುಳ್ಳಿ ಹಾಕಿ ಅದು ಮೃದುವಾಗಿ, ಹೊಂಬಣ್ಣಕ್ಕೆ ಬರುವವರೆಗೆ ಹುರಿಯಬೇಕು. ಹುರಿದ ಈರುಳ್ಳಿಗೆ ಹುಣಸೆಹಣ್ಣಿನ ರಸ, ತುರಿದ ಬೆಲ್ಲ, ಸಾಂಬಾರ್ ಪುಡಿ, ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ 2 ನಿಮಿಷ ಕುದಿಸಬೇಕು.ಈಗ ಮೊದಲೇ ಹುರಿದಿಟ್ಟುಕೊಂಡ ಹಾಗಲಕಾಯಿಯನ್ನು ಈ ಕುದಿಯುವ ಮಸಾಲೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 4-5 ನಿಮಿಷ ಬೇಯಿಸಿದ ಮೇಲೆ ತುರಿದ ಕಾಯಿತುರಿ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರವಾದ ಹಾಗಲಕಾಯಿ ಪಲ್ಯ ಸಿದ್ದವಾಗುತ್ತದೆ. ಇದು ಚಪಾತಿ ಮತ್ತು ರೊಟ್ಟಿಗ ಜತೆ ಸವಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !