ಚಂದ್ರಬಾಬು ಬಂಧನ ಖಂಡಿಸಿ ರಾಜ್‌ಘಾಟ್‌ನಲ್ಲಿ ಟಿಡಿಪಿ ನಾಯಕರ ಮೌನ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಬಾಬು ಬಂಧನ ಖಂಡಿಸಿ, ಟಿಡಿಪಿ ಸಂಸದರು ದೆಹಲಿಯ ರಾಜ್‌ಘಾಟ್‌ನಲ್ಲಿ ಮೌನ ಪ್ರತಿಭಟನೆ ನಡೆಸಿದರು. ನಾರಾ ಲೋಕೇಶ್ ಜೊತೆಗೂಡಿ ಎಲ್ಲಾ ಟಿಡಿಪಿ ಸಂಸದರು ಮಹಾತ್ಮ ಗಾಂಧಿಯವರ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಅಲ್ಲಿಯೇ ಕುಳಿತು ಕಪ್ಪು ಬ್ಯಾಡ್ಜ್ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಸಂಸದ ರಾಮಮೋಹನ್ ನಾಯ್ಡು, ಗಲ್ಲಾ ಜಯದೇವ್, ಮುರಳಿ ಮೋಹನ್, ಕನಕಮೇಡಲ ರವೀಂದ್ರ ಕುಮಾರ್, ಕೇಶಿನೇನಿ ನಾಣಿ, ಮುರಳಿ ಮೋಹನ್ ಕೂಡ ಭಾಗವಹಿಸಿದ್ದರು.

ಕೌಶಲ್ಯಾಭಿವೃದ್ಧಿ ನಿಗಮ ರಚನೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಎಪಿ ಸಿಐಡಿ ಚಂದ್ರಬಾಬು ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ  ಆದೇಶದಂತೆ ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಚಂದ್ರಬಾಬು ಬಂಧನ ಅಕ್ರಮ ಎಂದು ರಾಜ್ಯಾದ್ಯಂತ ಟಿಡಿಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!