ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರಿಗೆ ಹಾಸಿಗೆಯಿಂದ ಮೇಲೇಳುತ್ತಿದ್ದಂತೆ ಟೀ, ಕಾಫಿ ಅಥವಾ ಹಾಲು ಕುಡಿದು ಅಭ್ಯಾಸ. ಮನೆ ಆದರೆ ಆಗಿಂದಾಗ್ಗೆ ಚಹಾ ಮಾಡಿ ಕಡಿದರೆ ತೊಂದರೆಯಿಲ್ಲ. ಆದರೆ ಬೀದಿ ಬದಿ ಪದೇ ಪದೇ ಕಾಯಿಸಿ ಕೊಡುವ ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ.
ಒಂದು ಬಾರಿ ಕುದಿಸಿದ ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡದಿರುವುದು ಉತ್ತಮ ಯಾಕೆಂದರೆ ಈ ಸಮಯದಲ್ಲಿ, ಬ್ಯಾಕ್ಟೀರಿಯಾವು ವೇಗವಾಗಿ ಬೆಳೆಯುತ್ತದೆ. ಚಹಾದಲ್ಲಿ ಮೂಡುವ ಕೆನೆ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಅಂತಿದಾರೆ ಆರೋಗ್ಯ ತಜ್ಞರು. ಇದು ತಲೆನೋವು ಅಥವಾ ಹೊಟ್ಟೆನೋವಿನಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ.
ಒಂದೇ ಪಾತ್ರೆ ಪದೇ ಪದೇ ಬಳಸುವುದರಿಂದ ತಳಹಿಡಿಯುವ ಸಾಧ್ಯತೆ ಹೆಚ್ಚು, ಇದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಬೀದಿ ಬದಿ ಟೀ ಸ್ಟಾಲ್‌ಗಳಲ್ಲಿ ಪ್ಲೇಟ್ ಮುಚ್ಚದೆ ಕುದಿಸುತ್ತಿರುತ್ತಾರೆ. ಅಂತಹ ಸಮಯದಲ್ಲಿ ಸಣ್ಣ ಸಣ್ಣ ಕ್ರಿಮಿ ಕೀಟಗಳು ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿಯೇ ಆದಷ್ಟು ಪದೇ ಪದೇ ಕುದಿಸುವ ಟೀ ಕುಡಿಯುವುದನ್ನು ತಪ್ಪಿಸಿ.