ಮಳೆಗಾಲದಲ್ಲಿ ಬಿಸಿ ಟೀ ಜೊತೆ ಒಂದು ಸವಿಯಾದ ಬಿಸ್ಕತ್ ಇದ್ದರೆ ಯಾವ ರಿಲ್ಯಾಕ್ಸ್‌ಗೂ ಕಮ್ಮಿಯೇ ಇಲ್ಲ. ಅಂಗಡಿಗಳಿಂದ ತಿನ್ನೋ ಬದಲು, ಮನೆಯಲ್ಲಿ ಸ್ವಚ್ಛವಾಗಿ ತಯಾರಿಸಿದ ಟೀ ಟೈಮ್ ಸ್ನಾಕ್ ಇನ್ನೂ ರುಚಿಕರವಾಗಿ, ಆರೋಗ್ಯಕರವಾಗಿರುತ್ತದೆ. ಇವತ್ತು “ಗೋಡಂಬಿ ಬಟರ್ ಕುಕೀಸ್” (Cashew Butter Cookies) ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಹುರಿದ ಗೋಡಂಬಿ – 2 ಕಪ್
ನೀರು – ¼ ಕಪ್
ತೆಂಗಿನ ಎಣ್ಣೆ – ¼ ಕಪ್
ಸಕ್ಕರೆ – ½ ಕಪ್
ಮೊಟ್ಟೆ – 2
ಬೇಕಿಂಗ್ ಪೌಡರ್ – 1 ಟೀಸ್ಪೂನ್
ಉಪ್ಪು – ಸ್ವಲ್ಪ
ಚಾಕೋಚಿಪ್ಸ್ – 1 ಕಪ್
ಮಾಡುವ ವಿಧಾನ
ಮೊದಲು ಹುರಿದ ಗೋಡಂಬಿಯನ್ನು 15 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಬ್ಲೆಂಡರ್‌ನಲ್ಲಿ ಹಾಕಿ ನೀರು ಹಾಗೂ ತೆಂಗಿನ ಎಣ್ಣೆ ಸೇರಿಸಿ ಚನ್ನಾಗಿ ರುಬ್ಬಿಕೊಳ್ಳಿ.
ಈಗ ದೊಡ್ಡ ಬಟ್ಟಲಿನಲ್ಲಿ ಗೋಡಂಬಿ ಮಿಶ್ರಣ, ಸಕ್ಕರೆ, ಮೊಟ್ಟೆ, ಬೇಕಿಂಗ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ.
ಈಗ ಓವನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿ. ಬೇಕಿಂಗ್ ಶೀಟ್ ಮೇಲೆ ಬಟರ್ ಪೇಪರ್ ಅಂಟಿಸಿ. ಮಿಶ್ರಣದಿಂದ ಒಂದೊಂದೇ ಟೀಸ್ಪೂನ್ ಇರಿಸಿ, ಅವ್ಗಳನ್ನು ಚಪ್ಪಟೆಯಾಗಿ ಒತ್ತಿ ಅದರ ಮೇಲೆ ಚಾಕೋಚಿಪ್ಸ್ ಹರಡಿ ಓವನ್‌ನಲ್ಲಿ ಇಟ್ಟು 25-30 ನಿಮಿಷ ಬೇಯಿಸಿ. ನಂತರ ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.