March 31, 2026
Tuesday, March 31, 2026
spot_img

Viral | ಕ್ಲಾಸ್‌ರೂಮ್‌ನಲ್ಲೇ ಉಲ್ಟಾ ಮಲ್ಕೊಂಡು ಮಕ್ಕಳ ಕಾಲಲ್ಲಿ ಬೆನ್ನು ತುಳಿಸಿಕೊಂಡ ಟೀಚರಮ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲೆಯಲ್ಲಿ ಪಾಠ ಮಾಡೋದು ಬಿಟ್ರೆ ಶಿಕ್ಷಕರಿಗೆ ಇನ್ಯಾವ ಕೆಲಸವೂ ಇಲ್ಲ. ಪ್ರೊಫೆಷನಲ್‌ ಆಗಿ ಬಿಹೇವ್‌ ಮಾಡೋದನ್ನು ಬಿಟ್ಟು ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿ ವಿದ್ಯಾರ್ಥಿನಿ ಕಾಲಿನಿಂದ ಬೆನ್ನು ತುಳಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಚಿತ್ರಕೂಟದ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯಿನಿ ಮಧು ರೈ ಪಾಠ ಮಾಡೋದು ಬಿಟ್ಟು ಉಲ್ಟಾ ಮಲಗಿಕೊಂಡು ವಿದ್ಯಾರ್ಥಿನಿಗೆ ಬೆನ್ನು ಒತ್ತು ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಶಿಕ್ಷಕಿಯು ಡೀಪ್‌ ನೆಕ್‌ ಇರುವಂತಹ ಬಟ್ಟೆ ಹಾಕಿಕೊಂಡು ಮಲಗಿರುವುದು ಇರಿಸುಮುರಿಸು ತರಿಸಿದೆ. ಇದರ ಜತೆ ಪ್ರೊಫೆಷನಲ್‌ ಅಲ್ಲದಂತೆ ನಡೆದುಕೊಂಡಿರುವುದು ಪೋಷಕರಿಗೆ ಸಿಟ್ಟು ತರಿಸಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ಕೂಡಲೇ ತನಿಖೆಗೆ ಆದೇಶಿಸಿದೆ. ಚಿತ್ರಕೂಟದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲು ಮುಂದಾಗಿರುವುದು ವರದಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !