ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯೆ ಕಲಿಸುವ ಗುರುವಿಗೇ ಅಶ್ಲೀಲ ಕಮೆಂಟ್ ಮಾಡಿ ವಿಡಿಯೋ ಶೇರ್ ಮಾಡಿದ ಆರೋಪದಲ್ಲಿ ನಾಲ್ವರು ‘ವಿದ್ಯಾರ್ಥಿ’ಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಕಿಥೌರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಧನಾ ಇನಾಯತ್ಪುರ್ ಹಳ್ಳಿಯ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಹಲವು ಸಮಯಗಳಿಂದ ಈ ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಇತ್ತೀಚೆಗೆ ಶಾಲಾ ಆವರಣದಲ್ಲಿ ಈ ವಿದ್ಯಾರ್ಥಿಗಳು ಶಿಕ್ಷಕಿಗೆ ’ಐ ಲವ್ ಯೂ’ ಎಂದು ಕರೆದಿದ್ದಲ್ಲದೆ ಇದರ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಈ ವಿದ್ಯಾರ್ಥಿಗಳು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಶಿಕ್ಷಕಿ ಹಲವು ಬಾರಿ ತಿಳಿಹೇಳಿದ್ದರೂ ಪ್ರಯೋಜನವಾಗಿಲ್ಲ ಎಂದು ತನಿಖೆ ಕೈಗೆತ್ತಕೊಂಡಿರುವ ಪೊಲೀಸರು ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ ವಿದ್ಯಾರ್ಥಿಗಳು ೧೬ ವರ್ಷದ ಪ್ರಾಯದವರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ