ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಆಕ್ಟೀವ್ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಲಾಗಿದೆ. ಟೀಚರ್ ಒಬ್ಬಳು ಪುರುಷರನ್ನು ಹನಿಟ್ರ್ಯಾಪ್‌ಗೆ ಬೀಳಿಸಿದ್ದು, ಒಂದು ಮುತ್ತಿಗೆ ಐವತ್ತು ಸಾವಿರ ರೂಪಾಯಿ ಚಾರ್ಜ್ ಮಾಡಿದ್ದಾಳೆ.
ಸದ್ಯ ಶಿಕ್ಷಕಿ ಹಾಗೂ ಇನ್ನಿಬ್ಬರು ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಮಹಿಳೆ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದಳು. ಉದ್ಯಮಿ ತಮ್ಮ ಮಗುವನ್ನು ಈಕೆಯ ಪ್ಲೇಹೋಮ್‌ಗೆ ಕಳಿಸುತ್ತಿದ್ದರು.
ಸ್ನೇಹ ಬೆಳೆಸಿದ ನಂತರ ಆಕೆ ಉದ್ಯಮಿಗೆ ಶಾಲೆಯ ಅಭಿವೃದ್ಧಿ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಳು. ಮತ್ತೆ ವಾಪಾಸ್ ಮಾಡುತ್ತೇನೆ ಎಂದು ಹೇಳಿ ಹಣ ಪಡೆದಿದ್ದಳು, ಆದರೆ ವಾಪಾಸ್ ಕೇಳಿದಾಗ ಶಾಲೆಗೆ ಪಾರ್ಟ್‌ನರ್ ಆಗುವಂತೆ ಮನವೊಲಿಸಿದ್ದಳು. ಶಾಲೆಯ ಕೆಲಸಗಳು ನಡೆಯುವ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಕಾಫಿ, ಡಿನ್ನರ್ ಎಂದು ಓಡಾಡಿದ್ದರು.
ನಂತರ ಸಲುಗೆ ಪ್ರೀತಿಗೆ ತಿರುಗಿತ್ತು. ಉದ್ಯಮಿ ಹಣವನ್ನು ವಾಪಾಸ್ ಕೇಳಿದ್ದಾಗ ಆಕೆ ನಿನಗಾಗಿ ಏನು ಮಾಡೋಕಾದ್ರೂ ರೆಡಿ ಎಂದಿದ್ದಳು. ಆಕೆಯ ಮಾತನ್ನು ನಂಬಿ ಆತ ಅವಳ ಮನೆಗೆ ಹೋಗಿದ್ದ. ಈ ವೇಳೆ ಒಂದು ಮುತ್ತು ಕೊಟ್ಟಿದ್ದು, ಅದಕ್ಕೆ ಐವತ್ತು ಸಾವಿರ ರೂಪಾಯಿ ಪಡೆದಿದ್ದಳು. ನಿನ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುತ್ತೇನೆ ಎಂದು ಹೇಳಿ ಆತನ ನಂಬಿಕೆ ಗಳಿಸಿದ್ದಳು.
ನಂತರ 15 ಲಕ್ಷ ರೂಪಾಯಿ ಕೊಡು ಎಂದಿದ್ದಳು. ಆತ ಅದಕ್ಕೆ ಸಿಟ್ಟು ಮಾಡಿಕೊಂಡಿದ್ದ. ಇದಕ್ಕೆ ಶಿಕ್ಷಕಿ ಕೂಡ ಸಿಟ್ಟು ಮಾಡಿಕೊಂಡು ಉದ್ಯಮಿಯ ಪತ್ನಿಗೆ ಫೋನ್ ಮಾಡಿ ನಿಮ್ಮ ಪತಿಯನ್ನು ಶಾಲೆಗೆ ಕಳಿಸಿ ಕೆಲಸ ಇದೆ ಎಂದು ಹೇಳಿದ್ದಳು. ಶಾಲೆಗೆ ಬಂದಾಗ ಇಬ್ಬರು ರೌಡಿಗಳನ್ನು ಕರೆಸಿ ಅವಾಝ್ ಹಾಕಿಸಿದ್ದಳು. ನಿಮ್ಮ ವಿಷಯ ಎಲ್ಲರಿಗೂ ಹೇಳುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು. ಹೆದರಿ ಉದ್ಯಮಿ ಎರಡು ಲಕ್ಷ ರೂ. ಕೊಟ್ಟಿದ್ದರು.
ಇದಾದ ನಂತರ ಸುಮ್ಮನಾಗದ ಗ್ಯಾಂಗ್ ಶಿಕ್ಷಕಿ ಹಾಗೂ ಉದ್ಯಮಿಯ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡೋಕೆ ಶುರು ಮಾಡಿದ್ದರು. ಕಡೆಗೆ ಬೇಸತ್ತ ಉದ್ಯಮಿ ಪೊಲೀಸರ ಮೊರೆ ಹೋಗಿದ್ದರು. ಸದ್ಯ ಮೂವರನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಯುತ್ತಿದೆ.