ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಗನ ಹೆಸರು ರಿವೀಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಸಜ್ದೇಶ್​ ತಮ್ಮ ಮಗನಿಗೆ ‘ಅಹಾನ್ ಶರ್ಮಾ’ ಎಂದು ಹೆಸರಿಟ್ಟಿದ್ದಾರೆ. ಇದನ್ನು ರೋಹಿತ್ ಪತ್ನಿ ರಿತಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರೋಹಿತ್ -ರಿತಿಕಾ ಜೋಡಿ ಕಳೆದ ತಿಂಗಳು ಕೊನೆ ವಾರದಲ್ಲಿ ತಮ್ಮ 2ನೇ ಮಗುವನ್ನ ಸ್ವಾಗತಿಸಿದ್ದರು. ಇದಕ್ಕಾಗಿ ರೋಹಿತ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ 2ನೇ ಟೆಸ್ಟ್​ಗೂ ಮುನ್ನ ತಂಡವನ್ನ ಸೇರಿಕೊಂಡಿದ್ದಾರೆ.

ಡಿಸೆಂಬರ್ ತಿಂಗಳಾಗಿರುವುದರಿಂದ ಕ್ರಿಸ್‌ಮಸ್ ಸಾಂಟಾ ಗೆಟಪ್‌ನಲ್ಲಿರುವ ಫ್ಯಾಮಿಲಿ ಗೊಂಬೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ರಿತಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ರೋ (ರೋಹಿತ್ ಶರ್ಮಾ), ರಿಟ್ಸ್ (ರಿತಿಕಾ ಸಜ್ದೇಶ್​),ಸಮ್ಮಿ (ಸಮೈರಾ) ಮತ್ತು ಅಹಾನ್ ಎಂದು ನಾಲ್ಕು ಗೊಂಬೆಗಳ ಫೋಟೋವನ್ನ ಹಂಚಿಕೊಂಡಿದ್ದಾರೆ. ನವೆಂಬರ್ 15 ರಂದು ರಿತಿಕಾ ಅಹಾನ್​ಗೆ ಜನ್ಮ ನೀಡಿದ್ದರು.

ಸಂಸ್ಕೃತ ಮೂಲದ ಅಹಾನ್ ಎಂಬ ಹೆಸರಿನ ಅರ್ಥ “ಬೆಳಗ್ಗೆ” ಅಥವಾ “ಪ್ರಾರಂಭ” ಎಂದರ್ಥ ಬರುತ್ತದೆ. ಇದು ದಂಪತಿಗಳ ಜೀವನದಲ್ಲಿ ಹೊಸ ಅಧ್ಯಾಯವನ್ನು ಸಂಕೇತಿಸುತ್ತದೆ.

ರೋಹಿತ್ ಹಾಗೂ ರಿತಿಕಾ 2015ರ ಡಿಸೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 2018ರಲ್ಲಿ ಸಮೈರಾ ಎಂಬ ಮಗಳು ಜನಿಸಿದ್ದಳು. ಇದೀಗ 6 ವರ್ಷಗಳ ನಂತರ ಈ ಜೋಡಿ ಮಗ ಜನಿಸಿದ್ದು, ಅಹಾನ್ ಎಂದು ನಾಮಕರಣ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!