April 3, 2026
Friday, April 3, 2026
spot_img

ಐಪಿಎಲ್ ಸಂಭ್ರಮದ ನಡುವೆ ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಸಜ್ಜು: ಬಿಸಿಸಿಐಯಿಂದ ವೇಳಾಪಟ್ಟಿ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಅಬ್ಬರ ಶುರುವಾಗಿದ್ದು, ಎಲ್ಲಾ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದರ ನಡುವೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಭಾರತ ತಂಡ ಜುಲೈನಲ್ಲಿ ಜಿಂಬಾಬ್ವೆ ಪ್ರವಾಸ ಮಾಡಲಿದ್ದು, ಮೂರು ಪಂದ್ಯಗಳ ಟಿ20ಐ ಮ್ಯಾಚ್ ನಡೆಯಲಿದ್ದು, ಜುಲೈ 23, 25 ಹಾಗೂ 26 ರಂದು ಪಂದ್ಯಗಳು ನಡೆಯಲಿವೆ.

ಅದಕ್ಕೂ ಮುನ್ನ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಲಿದ್ದು, ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ.

ಸದ್ಯ ತಂಡ ಘೋಷಣೆಯಾಗಿಲ್ಲ. ಆದರೆ ಐಪಿಎಲ್ ಬಳಿಕ ಹಲವು ಯುವ ಆಟಗಾರರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿ
ಮೊದಲನೇ ಟಿ20 ಪಂದ್ಯ: ಜುಲೈ 23,ಎರಡನೇ ಟಿ20: ಜುಲೈ 25, ಮೂರನೇ ಟಿ20 ಜುಲೈ 26

ಇಂಗ್ಲೆಂಡ್‌ ಪ್ರವಾಸದ ವೇಳಾಪಟ್ಟಿ
ಟಿ20ಐ ಸರಣಿ
ಜುಲೈ 1,ಜುಲೈ 4,ಜುಲೈ 7, ಜುಲೈ 9, ಜುಲೈ 11

ಏಕದಿನ ಸರಣಿ
ಜುಲೈ 14, ಜುಲೈ 16, ಜುಲೈ 19

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !