ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ನಡುವೆ ಬಿಸಿಸಿಐ (BCCI) ಮತ್ತೊಂದು ಪ್ರವಾಸದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ವಾಸ್ತವವಾಗಿ ಬಿಸಿಸಿಐ, 2026 ರಲ್ಲಿ ಟೀಂ ಇಂಡಿಯಾ ಕೈಗೊಳ್ಳಲಿರುವ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ವೇಳಾಪಟ್ಟಿಯ ಪ್ರಕಾರ ಭಾರತ ಜುಲೈ 1, 2026 ರಿಂದ ಇಂಗ್ಲೆಂಡ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂದಲ್ಲಿ ಇರುತ್ತಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಜುಲೈ 1, 2026 ರಂದು ಡರ್ಹಾಮ್‌ನಲ್ಲಿ ನಡೆಯಲಿದೆ. ಉಳಿದ ನಾಲ್ಕು ಪಂದ್ಯಗಳು ಕ್ರಮವಾಗಿ ಜುಲೈ 4, 7, 9 ಮತ್ತು 11 ರಂದು ನಡೆಯಲಿದೆ.
ಎರಡು ದಿನಗಳ ವಿಶ್ರಾಂತಿಯ ನಂತರ ಏಕದಿನ ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಜುಲೈ 14 ರಂದು ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಜುಲೈ 16 ರಂದು ನಡೆಯಲಿದೆ. ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಜುಲೈ 18 ರಂದು ನಡೆಯಲಿದೆ. ಇದರೊಂದಿಗೆ ಸರಣಿ ಮುಕ್ತಾಯಗೊಳ್ಳಲಿದೆ.
ಸೂರ್ಯಕುಮಾರ್ ಯಾದವ್ ಎಂದಿನಂತೆ ಟೀಂ ಇಂಡಿಯಾದ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ರೋಹಿತ್ ಶರ್ಮಾ ಏಕದಿನ ತಂಡವನ್ನು ಮುನ್ನಡೆಸುತ್ತಾರೋ ಇಲ್ಲವೋ ಎಂಬುದನ್ನು ಬಿಸಿಸಿಐ ಶೀಘ್ರದಲ್ಲೇ ನಿರ್ಧರಿಸಬಹುದು.
ಭಾರತ ಇಂಗ್ಲೆಂಡ್ ಪ್ರವಾಸ ವೇಳಾಪಟ್ಟಿ
ಟಿ20 ಸರಣಿ ವೇಳಾಪಟ್ಟಿ
ಮೊದಲ ಟಿ20: ಜುಲೈ 1 (ಡರ್ಹಾಮ್)
ಎರಡನೇ ಟಿ20: ಜುಲೈ 4 (ಮ್ಯಾಂಚೆಸ್ಟರ್)
ಮೂರನೇ ಟಿ20: ಜುಲೈ 7 (ನಾಟಿಂಗ್ಹ್ಯಾಮ್)
4ನೇ ಟಿ20ಐ: ಜುಲೈ 9 (ಬ್ರಿಸ್ಟಲ್)
5ನೇ ಟಿ20: ಜುಲೈ 11 (ಸೌತಾಂಪ್ಟನ್)
ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ ಪಂದ್ಯ: ಜುಲೈ 14 (ಬರ್ಮಿಂಗ್ಹ್ಯಾಮ್)
ಎರಡನೇ ಏಕದಿನ ಪಂದ್ಯ: ಜುಲೈ 16 (ಕಾರ್ಡಿಫ್)
ಮೂರನೇ ಏಕದಿನ ಪಂದ್ಯ: ಜುಲೈ 19 (ಲಾರ್ಡ್ಸ್)