March 26, 2026
Thursday, March 26, 2026
spot_img

ನಾಳೆ ಟೀಮ್‌ ಇಂಡಿಯಾಗೆ ಕ್ರಿಕೆಟ್‌ ಇತಿಹಾಸದಲ್ಲೇ ಮರೆಯಲಾಗದ ಸೋಲು ಪಕ್ಕಾ: ಸ್ಯಾಮ್ ಕರನ್ ಭವಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

T20 ವಿಶ್ವಕಪ್ ಎರಡನೇ ಸೆಮಿಫೈನಲ್ ನಲ್ಲಿ ನಾಳೆ ಭಾರತ ಇಂಗ್ಲೆಂಡ್ ತಂಡ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೂ ಮುನ್ನಲೇ ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಸ್ಯಾಮ್ ಕರನ್ ಪಂದ್ಯ ಗೆಲ್ಲುವ ಮಾತುಗಳನ್ನಾಡಿದ್ದಾರೆ.

ಪಂದ್ಯದ ಸಿದ್ಧತೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಯಾಮ್ ಕರನ್, ಚಿಂತೆ ಬೇಡ, ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ. ನಮ್ಮ ಬಳಿ ಮ್ಯಾಜಿಕ್‌ ಬುಲೆಟ್‌ ಇದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಭಾರತದ ವಿರುದ್ದ ಗೆಲುತ್ತದೆ ಎಂದು ಹೇಳಿದ್ದಾರೆ.

ನಾಳೆ ವಾಂಖೆಡೆ ಕ್ರೀಡಾಂಗಣಕ್ಕೆ ಸಾವಿರಾರು ಅಭಿಮಾನಿಗಳು ಬರುತ್ತಾರೆ. ನಾವು ಅವರೆಲ್ಲರನ್ನೂ ಮೌನವಾಗಿಡಲು ನಮ್ಮದೇಯಾದ ಪ್ಲಾನ್‌ ರೆಡಿ ಮಾಡುತ್ತಿದ್ದೇವೆ. ಭಾರತ ಸೋತರೆ, ಅವರೆಲ್ಲರು ತಮ್ಮ ಕೈಗಳನ್ನು ತಲೆಯ ಮೇಲಿಟ್ಟುಕೊಂಡು ಸುಮ್ಮನೇ ಕುಳಿತುಕೊಳ್ಳುತ್ತಾರೆ. ನಾಳೆ ಕ್ರಿಕೆಟ್‌ ಇತಿಹಾಸದಲ್ಲೇ ಟೀಮ್‌ ಇಂಡಿಯಾ ಮರೆಯಲಾಗದ ಸೋಲನ್ನುಅನುಭವಿಸಲಿದೆ ಎಂದು ಸ್ಯಾಮ್ ಕರನ್ ಭವಿಷ್ಯ ನುಡಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕವೆನಿಸಿದೆ. ಈ ಮ್ಯಾಚ್‌ನಲ್ಲಿ ಗೆದ್ದ ತಂಡ ಫೈನಲ್‌ಗೇರಿದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !