ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದ ಭಾರತ ತಂಡದ ಯುವ ವೇಗಿ ಅರ್ಷದೀಪ್ ಸಿಂಗ್ಗೆ ಐಸಿಸಿ ಪಂದ್ಯದ ಸಂಭಾವನೆಯಲ್ಲಿ ಶೇ 15 ರಷ್ಟು ದಂಡವನ್ನು ವಿಧಿಸಿದೆ.
ಅರ್ಷದೀಪ್ ಸಿಂಗ್ ಅವರು ಕಿವೀಸ್ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುತ್ತಿದ್ದ ಡ್ಯಾರಿಲ್ ಮಿಚೆಲ್ ಅವರ ಮೇಲೆ ಅನಗತ್ಯವಾಗಿ ಚೆಂಡಿನಿಂದ ಥ್ರೋ ಮಾಡಿದ್ದರು. ಆ ಮೂಲಕ ಐಸಿಸಿ ನಿಯಮವನ್ನು ಉಲ್ಲಂಘನೆ ಮಾಡಿದ್ದರು.
ಐಸಿಸಿ ನಡವಳಿಕೆ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ಅರ್ಷದೀಪ್ಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ. ಆಟಗಾರರು ಹಾಗೂ ಆಟಗಾರರ ಬೆಂಬಲ ಸಿಬ್ಬಂದಿಗೆ ಸಂಬಂಧಿಸಿದ ಐಸಿಸಿ ನಡವಳಿಕೆ ಸಂಹಿತೆಯ ವಿಧಿ 2.9 ಅನ್ನು ಅರ್ಷದೀಪ್ ಉಲ್ಲಂಘಿಸಿರುವುದು ಕಂಡುಬಂದಿದೆ.
ಈ ವಿಧಿಯ ಪ್ರಕಾರ, ಅಂತಾರಾಷ್ಟ್ರೀಯ ಟೂರ್ನಿಯ ಪಂದ್ಯದ ವೇಳೆ ಆಟಗಾರನ ಕಡೆಗೆ ಅಥವಾ ಅವರ ಸಮೀಪಕ್ಕೆ ಚೆಂಡನ್ನು (ಅಥವಾ ಕ್ರಿಕೆಟ್ ಉಪಕರಣದ ಯಾವುದೇ ವಸ್ತುವನ್ನು) ಅಸಮರ್ಪಕ ಅಥವಾ ಅಪಾಯಕಾರಿಯಾದ ರೀತಿಯಲ್ಲಿ ಎಸೆಯಬಾರದು.
ಅರ್ಷದೀಪ್ ಸಿಂಗ್ ಒಂದು ಡೀಮೆರಿಡ್ ಅಂಕವನ್ನು ಕೂಡ ನೀಡಲಾಗಿದೆ. 24 ತಿಂಗಳ ಅವಧಿಯಲ್ಲಿ ಭಾರತ ತಂಡದ ವೇಗಿಯ ಮೊದಲ ಪ್ರಮಾದ ಇದಾಗಿದೆ. ಐಸಿಸಿ ಅಧಿಕಾರಿಗಳು ತೆಗೆದುಕೊಂಡು ತೀರ್ಪನ್ನು ಅರ್ಷದೀಪ್ ಸಿಂಗ್ ಒಪ್ಪಿಕೊಂಡಿದ್ದಾರೆ.
ಅರ್ಷದೀಪ್-ಮಿಚೆಲ್ ನಡುವಣ ಘಟನೆ ಏನು?
ಭಾರತ ತಂಡ ನೀಡಿದ್ದ 256 ರನ್ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಸಮಯ ಕಳೆದಿದ್ದ ಡ್ಯಾರಿಲ್ ಮಿಚೆಲ್ 17 ರನ್ ಸಿಡಿಸಿದ್ದರು. ಅಂದ ಹಾಗೆ 11ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ ಬೌಲಿಂಗ್ನಲ್ಲಿ ಡ್ಯಾರಿಲ್ ಮಿಚೆಲ್ ಎರಡು ಸತತ ಸಿಕ್ಸರ್ಗಳನ್ನು ಬಾರಿಸಿದ್ದರು. ನಂತರ ಕೆರಳಿದ ಅರ್ಷದೀಪ್ ಸಿಂಗ್ ಮುಂದಿನ ಎರಡು ಎಸೆತಗಳನ್ನು ಟಾಟ್ ಬಾಲ್ ಮಾಡಿದರು, ಬಳಿಕ ಐದನೇ ಎಸೆತದಲ್ಲಿ ವೈಡ್ ಯಾರ್ಕರ್ ಅನ್ನು ಡ್ಯಾರಿಲ್ ಮಿಚೆಲ್ ದೊಡ್ಡ ಹೊಡೆತನ್ನು ಹೊಡೆಯಲು ಹೋಗಿ ವಿಫಲರಾದರು. ಈ ವೇಳೆ ಅರ್ಷದೀಪ್ ಸಿಂಗ್ ಚೆಂಡನ್ನು ಹಿಡಿದು ಡ್ಯಾರಿಲ್ ಮಿಚೆಲ್ ಥೈಪ್ಯಾಡ್ಗೆ ಬಲವಾಗಿ ಹೊಡೆದರು.
ಇದರಿಂದ ಆಕ್ರೋಶಭರಿತರಾದ ಡ್ಯಾರಿಲ್ ಮಿಚೆಲ್, ಯುವ ವೇಗಿಯ ಎದುರು ಕಿಡಿಕಾರಿದರು ಹಾಗೂ ಫೀಲ್ಡ್ ಅಂಪೈರ್ಗೆ ದೂರು ನೀಡಿದರು. ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಅವರು ಮಿಚೆಲ್ ಬಳಿ ಬಂದು ಸಮಾಧಾನ ಮಾಡಿದರು. ನಂತರ ಅಂಪೈರ್ ಯುವ ವೇಗಿಯನ್ನು ಕರೆಸಿಕೊಂಡು ಎಚ್ಚರಿಕೆ ನೀಡಿದರು. ಆದರೂ ಅರ್ಷದೀಪ್ ಸಿಂಗ್ ಬ್ಯಾಟ್ಸ್ಮನ್ ಬಳಿ ಕ್ಷಮೆ ಕೇಳಲಿಲ್ಲ. ನಂತರ ಬಡ್ಯಾರಿಲ್ ಮಿಚೆಲ್ ಬಳಿ ತೆರಳಿದ ಅರ್ಷದೀಪ್, ಬ್ಯಾಟರ್ನ ಬೆನ್ನು ತವರಿ ಬಂದರು.



