ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಕೆರಿಬಿಯನ್ ದ್ವೀಪದ ಬೀಷ್‌ಗಳಲ್ಲಿ ವಾಲಿಬಾಲ್ ಆಡುತ್ತಾ ಸದ್ದು ಮಾಡಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೊಹ್ಲಿ ಓಡೋಡಿ ಬರುತ್ತಿದ್ದರೆ ಇಶಾನ್ ಕಿಶನ್ ವಾಲಿಬಾಲ್ ಆಡುತ್ತಿರುವ ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ.
ಇವರಲ್ಲಿ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ, ಸಿರಾಜುದ್ದೀನ್, ಇಶಾನ್ ಕಿಶನ್, ರವಿಚಂದ್ರ ಅಶ್ವಿನ್ ಸೇರಿದಂತೆ ಹಲವು ಕ್ರಿಕೆಟಿಗರು ಬೀಚ್‌ನಲ್ಲಿ ವಾಲಿಬಾಲ್ ಆಡುತ್ತಿರುವುದು ಕಂಡು ಬಂತು.
ಎರಡು ಟೆಸ್ಟ್, ಮೂರು ODI ಮತ್ತು ಐದು T20I ಪಂದ್ಯಗಳನ್ನು ಆಡಲು ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ. ಜುಲೈ 12 ರಿಂದ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ರಿತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಲಾಗಿದೆ.